×
Ad

ಖಾದಿ ನೇಕಾರರಿಗೆ 24.26 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆಗೊಳಿಸಿದ ರಾಜ್ಯ ಸರಕಾರ

Update: 2022-06-03 19:06 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 3: ಖಾದಿ ನೇಕಾರರಿಗೆ ಎರಡು ವರ್ಷಗಳಿಂದ ನೀಡಬೇಕಿದ್ದ 24.26 ಕೋಟಿ ರೂ.ಗಳ ಬಾಕಿ ಹಣವನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ರಾಜ್ಯದ ಉಣ್ಣೆ ಮತ್ತು ಅರಳೆ ಖಾದಿ ಕೈಮಗ್ಗ ನೇಕಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾರಣಕ್ಕಾಗಿ ರಾಜ್ಯ ಸರಕಾರ ಪ್ರತಿವರ್ಷ ಪ್ರೋತ್ಸಾಹ ಮಜೂರಿ ನೀಡುತ್ತದೆ. ಆದರೆ, ಕೋವಿಡ್ ಕಾರಣಕ್ಕಾಗಿ ಎರಡು ವರ್ಷಗಳಿಂದ ಆ ಹಣ ಹಂಚಿಕೆಯಾಗದೆ ಬಾಕಿ ಉಳಿದುಕೊಂಡಿತ್ತು ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಉಣ್ಣೆ ಮತ್ತು ಅರಳೆ ಖಾದಿಕೈಮಗ್ಗ ನೇಕಾರರ ಸಹಕಾರ ಸಂಘ ಪ್ರೋತ್ಸಾಹ ಮಜೂರಿಯನ್ನು ಬಿಡುಗಡೆ ಮಾಡಿ ನೆರವಾಗುವಂತೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸಂದಿಸಿದ ಸಚಿವರು ಸಿಎಂ ಗಮನ ಸೆಳೆದು ಬಾಕಿ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು. ಹೀಗಾಗಿ ಇದೀಗ ಸರಕಾರ ಹಣ ಬಿಡುಗಡೆ ಮಾಡಿದೆ.

ಸಚಿವ ಎಂಟಿಬಿ ನಾಗರಾಜು ಕೃತಜ್ಞತೆ: ಖಾದಿ ನೇಕಾರರ ಸಂಕಷ್ಟಕ್ಕೆ ಸ್ಪಂದಿಸಿ ಎರಡು ವರ್ಷಗಳ ಬಾಕಿ ಪ್ರೋತ್ಸಾಹ ಮಜೂರಿ ಧನ 24.26 ಕೋಟಿ ರೂ.ಬಿಡುಗಡೆಯ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಎಂಟಿಬಿ ನಾಗರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News