ಹಜ್ ಸಮಿತಿ ಪೋರ್ಟಲ್‍ನಿಂದ ಇ-ವೀಸಾ ಸೌಲಭ್ಯ

Update: 2022-06-03 15:29 GMT
ಸಾಂದರ್ಭಿಕ ಚಿತ್ರ - PTI

ಬೆಂಗಳೂರು, ಜೂ.3: 2022ನೆ ಸಾಲಿನ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿರುವ ಯಾತ್ರಿಗಳು ತಮ್ಮ ಇ-ವೀಸಾ ಅನ್ನು ಭಾರತೀಯ ಹಜ್ ಸಮಿತಿಯ ಪೋರ್ಟಲ್‍ನಿಂದ ನೇರವಾಗಿ ಡೌನ್‍ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ ಎಂದು ಭಾರತೀಯ ಹಜ್ ಸಮಿತಿಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾವೀದ್ ಕಲಂಗಡೆ ತಿಳಿಸಿದ್ದಾರೆ.

ಭಾರತೀಯ ಹಜ್ ಸಮಿತಿಯ ವೆಬ್ ಪೇಜ್  https://hcoi3.hajcommittee.in/webapp/web21/index.php ನಿಂದ ಯಾತ್ರಿಗಳು ಇ-ವೀಸಾ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದ, ಯಾತ್ರೆಯ ಸಂದರ್ಭದಲ್ಲಿ ಯಾತ್ರಿಗಳಿಗೆ ಆಗುವಂತಹ ಹಲವಾರು ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಯಾತ್ರೆಗೆ ಪ್ರಯಾಣ ಆರಂಭಿಸಲು ಹಜ್ ಯಾತ್ರಿಗಳು ಎಂಬಾರ್ಕೇಷನ್ ಪಾಯಿಂಟ್ ಬಳಿ ಬಂದಾಗ ಇ-ವೀಸಾದ ಪ್ರಿಂಟ್ ಪ್ರತಿ ಹಾಗೂ ತಮ್ಮ ಸ್ಮಾರ್ಟ್‍ಫೋನ್‍ನಲ್ಲಿಯೂ ಅದನ್ನು ಡೌನ್‍ಲೌಡ್ ಮಾಡಿಟ್ಟುಕೊಂಡಿರುವಂತೆ ಜಾವೀದ್ ಕಲಂಗಡೆ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News