ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆ ಆಯೋಜನೆ
ಬೆಂಗಳೂರು, ಜೂ. 4: ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ಯೋಗ ಗಂಗೋತ್ರಿ ಸಂಸ್ಥೆ'ಯು ‘ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆ'ಯನ್ನು ನಾಳೆ(ಜೂ. 5) ನಗರದಲ್ಲಿ ಆಯೋಜಿಸುತ್ತಿದೆ.
ಈ ಸ್ಪರ್ಧೆಯಲ್ಲಿ ಅಸ್ಟ್ರೇಲಿಯ, ಇಂಗ್ಲೆಂಡ್ ಓಮನ್ ಮಲೇಷಿಯಾ, ಭೂತಾನ್ ಮತ್ತಿತರ ರಾಷ್ಟ್ರಗಳಿಂದ ಯೋಗಪಟುಗಳು ಭಾಗವಹಿಸಲಿದ್ದಾರೆ. ಅಲ್ಲದೆ, ದೇಶದ ಬೇರೆ ಬೇರೆ ರಾಜ್ಯಗಳಿಂದಲೂ ಯೋಗ ಪಟುಗಳು ಭಾಗವಹಿಸಿ ಯೋಗ ಪ್ರದರ್ಶನ ನೀಡಲಿದ್ದಾರೆ. ಇದೇ ವೇಳೆ ಯೋಗ, ಗಂಗೋತ್ರಿ ಸಂಸ್ಥೆಯ, ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಯೋಗ ಶಿಕ್ಷಕರಿಗೆ ಯೋಗ ಸಾಧಕರಿಗೆ, ಯೋಗ ಗುರುಗಳಿಗೆ ಪ್ರತೀ ವರ್ಷವೂ ಸಹ ‘ಯೋಗ ಸಾಧಕ ಪ್ರಶಸ್ತಿ ಮತ್ತು ಯೋಗೆ ಸೇವಾರತ್ನ ಪ್ರಶಸ್ತಿ'ಗಳನ್ನು ನೀಡುತ್ತಿದ್ದು, ಯೋಗ ಕ್ಷೇತ್ರದ ಆರು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.
ಇದೇ ವೇಳೆ ಗಿನ್ನಿಸ್ ದಾಖಲೆ ಮಾಡಿದ ಹಲವು ಯೋಗಪಟುಗಳು ವಿಶೇಷ ಯೋಗ ಪ್ರದರ್ಶನ ನೀಡಲಿದ್ದಾರೆ. ಯೋಗಾಸನ ಜಾಗೃತಿಗೆ ‘ಯೋಗ ವಾಕಥಾನ್' ಅನ್ನು ಆಯೋಜಿಸಲಾಗಿದೆ ಎಂದು ಯೋಗ ಗಂಗೋತ್ರಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.