PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಬಂಧಿತರ ಸಂಖ್ಯೆ 39ಕ್ಕೆ ಏರಿಕೆ
Update: 2022-06-04 20:01 IST
ಬೆಂಗಳೂರು, ಜೂ.4: ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು ಇಲ್ಲಿಯವರೆಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಸಂತರಾಯ್ ನರಿಬೋಳ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಪಿಎಸ್ಸೈ ಪರೀಕ್ಷೆ ಅಭ್ಯರ್ಥಿ ಎನ್.ವಿ.ಸುನೀಲ್‍ಕುಮಾರ್ ತಂದೆಯಾಗಿದ್ದು, ಸುನೀಲ್‍ನನ್ನ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುವುದಕ್ಕೆ ಆರ್.ಡಿ.ಪಾಟೀಲ್ ಮೊರೆ ಹೋಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.