ಆರೆಸ್ಸೆಸ್ ಚಡ್ಡಿ ಕುರಿತ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರಲ್ಲ: ಬಿ.ಎಸ್ ಯಡಿಯೂರಪ್ಪ
Update: 2022-06-07 16:46 IST
ಬಾಗಲಕೋಟೆ : ಆರೆಸ್ಸೆಸ್ ಚಡ್ಡಿ ಕುರಿತು ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರಲ್ಲ ಎಂದು ಮಾಜ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನಾಗಿ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಅನ್ನೋ ನಿರೀಕ್ಷೆ ಮಾಡಿದ್ದೆವು. ಆರೆಸ್ಸೆಸ್ ಮತ್ತು ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವಷ್ಟು ಗೌರವ ಸಹ ಹಾಳಾಗುತ್ತೆ ಎಂದು ಹೇಳಿದ್ದಾರೆ.
ಪಠ್ಯ ಪರಿಷ್ಕರಣೆಯಲ್ಲಿ ಲೋಪಗಳಾಗಿದ್ದರೆ, ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.