×
Ad

''ಬಿಜೆಪಿ ತಮ್ಮ ನಾಯಕರಿಗೆ ಚಡ್ಡಿಯನ್ನು ಭದ್ರವಾಗಿ ಕಟ್ಟಿಕೊಳ್ಳುವ ತರಬೇತಿ ಕೊಡಲಿ'': ಕಾಂಗ್ರೆಸ್ ವ್ಯಂಗ್ಯ ಸಲಹೆ

Update: 2022-06-07 18:08 IST

ಬೆಂಗಳೂರು, ಜೂ. 7: ‘ಕಂಡ ಕಂಡಲ್ಲಿ ಚಡ್ಡಿ ಬಿಚ್ಚುವ ಸಂಸ್ಕೃತಿಯ ಬಿಜೆಪಿ ನಾಯಕರಿಗೆ ಚಡ್ಡಿ ಬಗ್ಗೆ ಪ್ರೇಮ ಉಕ್ಕುತ್ತಿರುವುದೇಕೆ? ಬಿಜೆಪಿ ನಾಯಕರಿಗೆ ಚಡ್ಡಿ ಎಂದರೆ ಅಲರ್ಜಿ ಎಂಬುದನ್ನು ರಮೇಶ್ ಜಾರಕಿಹೊಳಿ, ರಘುಪತಿ ಭಟ್ ಸೇರಿದಂತೆ ಹಲವರು ನಿರೂಪಿಸಿದ್ದಾರೆ! ಬಿಜೆಪಿ ಮೊದಲು ತಮ್ಮ ನಾಯಕರಿಗೆ ಚಡ್ಡಿಯನ್ನು ಭದ್ರವಾಗಿ ಕಟ್ಟಿಕೊಳ್ಳುವ ತರಬೇತಿ ಕೊಡಲಿ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಸರಕಾರದ ಶಿಕ್ಷಣ ಸಚಿವರು ಚಡ್ಡಿ ಗ್ಯಾಂಗಿನ ಕೇಶವಕೃಪಾಕ್ಕೆ ಹೋಗಿ ಪಠ್ಯ ಪರಿಷ್ಕರಣೆಯ ವರದಿ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ. ಪಠ್ಯದ ಎಲ್ಲ ತಿರುಚುವಿಕೆಯ ಹಿಂದೆ ಸಂವಿಧಾನ ವಿರೋಧಿ ಆರೆಸ್ಸೆಸ್ ಇದೆ ಎಂಬುದು ಈಗ ಸ್ಪಷ್ಟವಾಗಿದೆ' ಎಂದು ವಾಗ್ದಾಳಿ ನಡೆಸಿದೆ.

‘ಬಿಜೆಪಿ ನಾಯಕರ ಚಡ್ಡಿ ಬಿಚ್ಚುವ ಪುರಾಣವನ್ನು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶ ನೋಡಿದೆ. ಇಷ್ಟೆಲ್ಲ ‘ಚಡ್ಡಿ ಅಲರ್ಜಿ' ಹೊಂದಿರುವವರು ಚಡ್ಡಿ ಸುಟ್ಟರೆ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಿರುವುದೇಕೆ? ಬಿಜೆಪಿ ಮೊದಲು ತಮ್ಮ ನಾಯಕರಿಗೆ ಚಡ್ಡಿ ಕಳಿಸಿಕೊಡಲಿ, ಚಡ್ಡಿಯನ್ನು ಭದ್ರವಾಗಿ ಹಾಕಿಕೊಳ್ಳುವುದನ್ನು ಕಲಿಸಿ ತಮ್ಮ ಮರ್ಯಾದೆ ಕಾಪಾಡಿಕೊಳ್ಳಲಿ' ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News