×
Ad

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕೃಷ್ಣ ಭಟ್ ಎಲ್ಲಿ ಹೋದ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

Update: 2022-06-08 14:07 IST

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ  ಬಿಟ್‌ ಕಾಯಿನ್ ಹಗರಣದ ಕುರಿತು ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, 'ಪ್ರಕರಣವನ್ನು ಸರಕಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಬಿಜೆಪಿ ಸರ್ಕಾರದಲ್ಲಿ ದಿನಕ್ಕೊಂದು ಹಗರಣ ಹೊರಬರುತ್ತಿವೆ. ದೇಶ ಕಂಡು ಕೇಳರಿಯದ ಬಿಟ್ ಕಾಯಿನ್ ಹಗರಣದಲ್ಲಿ ಸಾವಿರಾರು ಕೋಟಿಯ ಲೂಟಿ ನಡೆದಿದೆ. ಆರೋಪಿ ಶ್ರೀಕೃಷ್ಣ ಭಟ್ ಎಲ್ಲಿ ಹೋದ, ತನಿಖೆ ಏನಾಯಿತು, ಯಾರೆಲ್ಲಾ ಬಾಗಿದಾರರು, ಎನ್ನುವ ಎಲ್ಲಾ ವಿಚಾರಗಳಿಗೆ ಬಿಜೆಪಿ ಸರ್ಕಾರ ಸಮಾಧಿ ತೊಡಲು ಯತ್ನಿಸುತ್ತಿದೆ'' ಎಂದು ಕಾಂಗ್ರೆಸ್ ಆಪಾದಿಸಿದೆ.

ಈ ಹಿಂದೆ ಪ್ರಕರಣದ ಆರೋಪಿ 'ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಜೀವಕ್ಕೆ ಅಪಾಯ ಇದೆ. ಆತನಿಗೆ ಪೊಲೀಸ್ ರಕ್ಷಣೆ ಕೊಡಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಸರಕಾರವನ್ನು ಒತ್ತಾಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News