×
Ad

ದ್ರಾವಿಡ ಸಮುದಾಯಗಳು ಒಂದಾದರೆ ಕೋಮುಗಲಭೆಗಳು ತಣ್ಣಗಾಗಲಿದೆ: ಪ್ರೊ.ಅರವಿಂದ ಮಾಲಗತ್ತಿ

Update: 2022-06-08 20:37 IST

ಮೈಸೂರು,ಜೂ.8: 'ದ್ರಾವಿಡ ಸಮುದಾಯಗಳು ಒಂದಾದರೆ ಕೋಮುಗಲಭೆಗಳು ತಣ್ಣಗಾಗಲಿದೆ' ಎಂದು ಸಾಹಿತಿ .ಅರವಿಂದ ಮಾಲಗತ್ತಿ ಪ್ರತಿಪಾದಿಸಿದರು.

ನಗರದ ಚಾಮುಂಡಿ ಬೆಟ್ಟದತಪ್ಪಲಿನಲ್ಲಿರುವ ಸುಡುವ ರುದ್ರಭೂಮಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ, ಮಡೆಸ್ನಾನ ವಿರೋಧಿ ಹೋರಾಟಗಾರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಕೆ.ಎಸ್.ಶಿವರಾಮು ಅವರ ಜನ್ಮದಿನದ ಅಂಗವಾಗಿ ಸಾಮರಸ್ಯಕ್ಕಾಗಿ ದ್ರಾವಿಡರು, ಮುಸ್ಲಿಂ ಹಾಗೂ ಕ್ರಿಶ್ಚಿಯನ್  ಸೌಹಾರ್ದ ಕೂಟ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚರಿತ್ರೆ ನೋಡಿದರೆ ಆರ್ಯರ ಬದುಕಿನ ಉದ್ದಕ್ಕೂ ಅಭದ್ರತೆ ಕಾಡಿದೆ. ಹಾಗಾಗಿ ಅವರು ಜಾತಿಯತೆಯನ್ನು ಬಿಂಬಿಸುತ್ತಿದ್ದಾರೆ. ಜಾತಿಯತೆ ಅಸ್ಪೃಶ್ಯತೆ ನಿರ್ಮೂಲನೆಯಾಗಲು ದ್ರಾವಿಡ ಪರಿಕಲ್ಪನೆ ಪುನರುತ್ತಾನ ಗೊಳ್ಳಬೇಕು ಎಂದು ಹೇಳಿದರು.

ಅಂಡಮಾನ್ ನಲ್ಲಿ ಎಲ್ಲಾ ಜಾತಿ  ಧರ್ಮದವರು ಇದ್ದಾರೆ. ಅಲ್ಲಿ ಅವರು ಜಾತಿ ಧರ್ಮ ಪರಿಗಣಿಸದೇ ಯಾರನ್ನು ಬೇಕಾದರೂ ವಿವಾಹವಾಗಲಿದ್ದಾರೆ. ನಾನು ಇತ್ತೀಚೆಗೆ ಕೆ.ಜಿ.ಎಫ್ ಗೆ ಹೋಗಿದ್ದಾಗ ಹಿಂದೂ,ಕ್ರೈಸ್ತ, ಮುಸಲ್ಮಾನ್ ಸ್ಮಶಾನಗಳು ಪ್ರತ್ಯೇಕವಾಗಿದ್ದರೂ ಒಂದೇ ಕಡೆ ಇದೆ. ಬ್ರಿಟಿಷರು ಕೆಲವು ಒಳ್ಳೆಕೆಲಸಗಳನ್ನು ಮಾಡಿ ಹೋಗಿದ್ದಾರೆ. ಅದರಲ್ಲಿ ಭಿನ್ನ ಸಂಸ್ಕೃತಿ ಆಚರಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ಹೋರಾಟಗಾರ ಕೆ.ಎಸ್.ಶಿವರಾಮ್ ತಮ್ಮಹುಟ್ಟುಹಬ್ಬದ ಅಂಗಾವಾಗಿ ರುದ್ರಭೂಮಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಾಮರಸ್ಯ ಸಹಬಾಳ್ವೆ ಮೂಡಿಸಲು ಸಹಕಾರವಾಗಲಿದೆ. ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ಮತ್ತು ದೇಶಾದ್ಯಂತ ನಡೆಯುವ ಅಗತ್ಯವಿದೆ ಎಂದು ಹೇಳಿದರು.

ನಾನು ಈ ಹಿಂದೆ ಉಡುಪಿಯ  ಹಿರಿಯ ಪೇಜಾವರ ಶ್ರಿಗಳಿಗೆ ಮನವಿ ಮಾಡಿದ್ದೆ. ಎಲ್ಲಾ ಸಮುದಾಯಗಳ ಸಹಪಂಕ್ತಿ ಭೊಜನ ಆಯೊಜನೆ ಮಾಡುವಂತೆ ಹೆಳಿದ್ದೆ. ಆದರೆ ಅವರು ಇದು  ಕಷ್ಟದ ಮಾತು ಎಂದು ಹೆಳಿದ್ದರು. ಇಂತಹ ಕಾರ್ಯಕ್ರಮಗಳು ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಹಕಾರಿಯಾಗಿದೆ ಎಂದರು.

ದ್ರಾವಿಡರು ಆರ್ಯರ ಪರಿಕಲ್ಪನೆಗೆ ಹಲವಾರು ವಾದಗಳಿವೆ, ಆದರೆ ಇತ್ತೀಚೆಗೆ ಸುಬ್ರಹ್ಮಣ್ಯ ಸ್ವಾಮಿ ಅವರ ಪ್ರಕಾರ ಎಲ್ಲರ ಡಿಎನ್ ಎ ಒಂದೇ ಇದ್ದು ಎಲ್ಲರು ಇಲ್ಲಿಯವರೆ ಎಂದಿದ್ದಾರೆ. ಹಾಗಾಗಿ ಆರ್ಯರು ಮೂಲನಿವಾಸಿಗಳು ಎಂದ ಹೆಳುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದ್ರಾವಿಡರಷ್ಟೇ ಮೂಲನಿವಾಸಿಗಳು ಎಂದು ಒಪ್ಪಿಕೊಂಡರೆ ವೈದಿಕ ಧರ್ಮ ವಲಸೆ ಬಂದವರು  ಎಂದಾಗುತ್ತದೆ. ಹೊಡೆದು ಆಳುವ ನೀತಿ ಬ್ರಿಟಿಷರದಲ್ಲ, ಅದು ಇಲ್ಲೇ ಇತ್ತು ಎನ್ನಲು ವರ್ಣ ವ್ಯವಸ್ಥೆ ಜಾತಿ ವ್ಯವಸ್ಥೆ  ಕಾರಣ ಎಂದು ನಿರೂಪಿಸುತ್ತದೆ ಎಂದರು.

ಮಾಕ್ಸ್ ಮುಲ್ಲರ್ ದ್ರಾವಿಡರನ್ನು ಮೂಲನಿವಾಸಿಗಳು ಎಂದು ವಾದ ಮಂಡಿಸಿದರೆ ಇದನ್ನು ಬ್ರಿಟಿಷರು  ಸ್ವಪ್ರತಿಷ್ಟೆ ಹೆಚ್ಚಿಸಿಕೊಳ್ಳುವ ಇಂತಹ ವಾದ ಮಂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಆ ರೀತಿ ಮಾಡುವ ಹಾಗಿದ್ದರೆ ಸಂಸ್ಕೃತ ಭಾಷೆಗಿಂತ ಗ್ರೀಕ್ ಭಾಷೆ ಶ್ರೀಮಂತ ಎಂದು ಯಾಕೆ ಹೇಳುತ್ತಿದ್ದರು ಎಂದು ಪ್ರಶ್ನಿಸಿದರು.

 ಪೆರಿಯಾರ್ ರಾಮಸ್ವಾಮಿ  ತಮಿಳುನಾಡಿನಲ್ಲಿ ದೊಡ್ಡ ದ್ರಾವಿಡ ಚಳುವಳಿ ಮಾಡಿದರು. ಅದರ ಪ್ರೇರಣೆಯಿಂದ 1905 ರಲ್ಲಿ ಇಲ್ಲಿಯೂ ಮಹರಾಜರಿಗೆ ಅರ್ಜಿಸಲ್ಲಿಸಿ ಆದಿದ್ರಾವಿಡರು ಎಂದು ಕರೆಯಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ದ್ರಾವಿಡರು ಅರಪೆÇ್ಪ ಮಹೆಂಜದಾರೊ ಇತಿಹಾಸ ಕಟ್ಟಿದವರು, ದ್ರಾವಿಡ ಭಾಷೆಗಳಲ್ಲಿ 85 ಭಾಷೆಗಳನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ 25 ಪ್ರಧಾನ ಭಾಷೆಗಳು, ದಾಖಲೆ ಪ್ರಕಾರ ಹದಿಮೂರು ವರೆ ಕೋಟಿ ಜನ ದ್ರಾವಿಡ ಭಾಷೆ ಮಾತನಾಡುತ್ತಾರೆ ಎಂದರು.

ದ್ರಾವಿಡ ಪರಿಕಲ್ಪನೆ ಇಂದು ಹೆಚ್ಚು ಅಗತ್ಯವಿದೆ. ಆರ್ಯರ ಸಂಸ್ಕೃತಿಗೆ ತಳುಕಿಹಾಕಿಕೊಂಡರೆ ದ್ರಾವಿಡರು ಒಂದಾಗಲು ಸಾಧ್ಯವಿಲ್ಲ. ದ್ರಾವಿಡ ಭಾಷೆ ಶ್ರೀಮಂತ ಮತ್ತು ಪ್ರಾಚೀನ ಪರಂಪರೆ ಹೊಂದಿದೆ. ಪ್ರಪಂಚದ ಭಾಷೆಗಳಲ್ಲಿ ಇದು ಐದನೇ ಸ್ಥಾನ ಹೊಂದಿದೆ ಎಂದು ಹೇಳಿದರು.

ಇದೇ ವೇಳೆ ಬುದ್ಧ ಬಸವ, ಅಂಬೇಡ್ಕರ್ ಸೇರಿದಂತೆ ಮಹಾನಿಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಎಲ್ಲರೂ ಒಟ್ಟಿಗೆ ಕುಳಿತು ಸಸ್ಯಹಾರ ಹಾಗೂ ಮಾಂಸಹಾರ ಸಹಪಂಕ್ತಿ ಭೋಜನ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಮಾಜಿ ಮೇಯರ್ ಪುರುಷೋತ್ತಮ್, ಎಂ.ಎಫ್.ಕಲೀಂ, ಮಹಮದ್ ತಯೀರ್ ಆಲಿ, ಫ್ರಾನ್ಸಿಸ್, ಅಭಿಲಾಷ, ಅಬ್ದುಲ್ ಖಾದೀರ್, ಬಾಬು ಸೇಠ್, ಬಾಬು ಮಿರ್ಚಿ, ಅಸಾದ್ ಉಲ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಭಾರತದ ನಿಜವಾದ ಮೂಲನಿವಾಸಿಗಳು ದ್ರಾವಿಡರು, ದ್ರಾವಿಡರು ಈ ದೇಶದ ಸಂವಿಧಾನದ ವಾರಸುದಾರರು, ಪ್ರಜಾಪ್ರಭುತ್ವದ ವಾರಸುದಾರರು,  ಸಂಘಪರಿವಾರ ಮತ್ತು ಆರಸ್ಸೆಸ್ ನವರು ಮನೆಹಾಳು,  ನಮ್ಮ ಕಣ್ಣೀರನ್ನು ಹೊರೆಸದಿರುವ, ವಿದ್ಯೆ ನಿರಾಕರಿಸುವ, ರಾಜ್ಯಾಧಿಕಾರ ನೀಡದ, ಸಮಾನತೆ ಇಲ್ಲದ ಹಿಂದುತ್ವ ನಮ್ಮ ಕಾಲಿನ ಚಪ್ಪಲಿಯ ದೂಳು ಇದ್ದಂತೆ. 

-ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಗತಿಪರ ಚಿಂತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News