ಪ್ರಮೋದ್ ಮುತಾಲಿಕ್ ವಿರುದ್ಧ ಭದ್ರಾವತಿ ಪೊಲೀಸ್ ಠಾಣೆಗೆ ದೂರು
ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಸಿ.ಎಂ.ಖಾದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿ.ಎಂ.ಖಾದರ್ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಘಟಕದ ಸದಸ್ಯರು ಭದ್ರಾವತಿ ನಗರ ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರಿಗೆ ದೂರು ನೀಡಿದ್ದಾರೆ.
ದೂರು ನೀಡಲು ಕಾರಣವೇನು ?
ಪ್ರಮೋದ್ ಮುತಾಲಿಕ್ ಅವರು ಇತ್ತೀಚೆಗೆ ಗುಂಡು ಹೊಡೆಯುವುದಾಗಿ ಹೇಳಿಕೆ ನೀಡಿದ್ದರು. ಮಸೀದಿಗಳಲ್ಲಿ ಆಝಾನ್ ಕೂಗಲು ಧ್ವನಿ ವರ್ಧಕ ಬಳಕೆ ಮಾಡಬಾರದು. ಇದನ್ನು ಸರ್ಕಾರ ತಡೆಯಲು ಆಗದಿದ್ದರೆ ಸರ್ಕಾರವನ್ನು ನಮ್ಮಕೈಗೆ ಒಪ್ಪಿಸಲಿ. ನಾವು ಅವರಿಗೆಗುಂಡಿಕ್ಕುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಅಮೋಸ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ಲಾಬ್ ಅಹ್ಮದ್, ಉಪಾಧ್ಯಕ್ಷ ತಬ್ರೇಝ್ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.