×
Ad

PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮೊದಲನೆ ರ್‍ಯಾಂಕ್ ಅಭ್ಯರ್ಥಿ ಬಂಧನ

Update: 2022-06-09 21:26 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.9: ಪಿಎಸ್ಸೈ ನೇಮಕಾತಿ ಅಕ್ರಮ ಸಂಬಂಧ ಪರೀಕ್ಷೆಯಲ್ಲಿ ಮೊದಲನೆ ರ್‍ಯಾಂಕ್ ಗಳಿಸಿದ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೊದಲ ರ್‍ಯಾಂಕ್ ಪಡೆದಿದ್ದ ಕುಶಾಲ್‍ನನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಒಎಂಆರ್ ಪ್ರತಿ ತಿದ್ದಿದ್ದ ಆರೋಪದಡಿ ಕುಶಾಲ್ ಬಂಧನವಾಗಿದ್ದು, ಈತನ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದೇ ಪ್ರಕರಣ ಸಂಬಂಧ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ. 

ಎಫ್‍ಎಸ್‍ಎಲ್ ವರದಿಯಲ್ಲಿ ಅಭ್ಯರ್ಥಿ ದರ್ಶನ್ ಅಕ್ರಮದ ಸತ್ಯ ಬಹಿರಂಗವಾಗಿದ್ದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ದರ್ಶನ್ ಗೌಡ ರ್ಯಾಂಕ್ ಬಂದಿದ್ದ. ಪರೀಕ್ಷೆ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರ ಮಾತ್ರ ಬರೆದಿದ್ದ. ಉಳಿದ ಜಾಗದಲ್ಲಿ ಹಾಗೆ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ ಎನ್ನಲಾಗಿದೆ.

ನೇಮಕಾತಿ ವಿಭಾಗದಲ್ಲೇ ಆರೋಪಿಯ ಉತ್ತರ ಪತ್ರಿಕೆ ತಿದ್ದಿದ್ದಾರೆ. ಖಾಲಿ ಉತ್ತರ ಪತ್ರಿಕೆಯನ್ನು ದರ್ಶನ್ ಗೌಡ ಕೊಟ್ಟು ಹೋಗಿದ್ದು, ಬಳಿಕ ಒಎಂಆರ್ ಶೀಟ್ ಸಂಖ್ಯೆ ತಿಳಿಸಿದ್ದ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News