×
Ad

ಖಾಸಗಿ ಪ್ರವಾಸ; ಕೊಡಗಿಗೆ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2022-06-09 23:52 IST

ಮಡಿಕೇರಿ ಜೂ.9 : ಕೇಂದ್ರ ಸರಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೊಡಗಿಗೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪುಸ್ತಕ ನೀಡುವ ಮೂಲಕ ಕೇಂದ್ರ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಹಾಜರಿದ್ದರು.

ಸಚಿವರ ಖಾಸಗಿ ಪ್ರವಾಸ ಇದಾಗಿದ್ದು, ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಇರಲಿದ್ದಾರೆ. ಯಾವುದೇ ಅಧಿಕೃತ ಕಾರ್ಯಕ್ರಮಗಳಿರುವುದಿಲ್ಲ. ಕೊಡಗಿನ ಪಾಲಿಬೆಟ್ಟದ ಥನೀರ್ಹುಲ್ಲಾ ಬಂಗ್ಲೆಯಲ್ಲಿ ಸಚಿವರು ತಂಗಲಿದ್ದು, ಶುಕ್ರವಾರ ಮಡಿಕೇರಿಯ ತಾಜ್ ರೆಸಾರ್ಟ್‍ಗೆ ಆಗಮಿಸಿ ಮೂರು ದಿನಗಳಕಾಲ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಜೂ.13 ರಂದು ಮುಂಜಾನೆ ಬೆಂಗಳೂರು ಮಾರ್ಗವಾಗಿ ನಾಗ್‍ಪುರಕ್ಕೆ ತೆರಳಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News