ಥೈಲ್ಯಾಂಡ್ ನಂತೆ ಭಾರತವೂ ಗಾಂಜಾ ಕಾನೂನುಬದ್ಧಗೊಳಿಸಲಿ ಎಂದ ನಟ ಚೇತನ್

Update: 2022-06-10 17:37 GMT

ಬೆಂಗಳೂರು:  ಥೈಲ್ಯಾಂಡ್‌ನಲ್ಲಿ ಗಾಂಜಾ ಬೆಳೆಯುವುದು ಕಾನೂನು ಬದ್ಧ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ ಭಾರತವೂ ಕೂಡ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಚೇತನ್, 'ಥೈಲ್ಯಾಂಡ್ ಗಾಂಜಾವನ್ನು ಕಾನೂನುಬದ್ಧಗೊಳಿಸಿದ ಮೊದಲ ಏಷ್ಯಾದ ರಾಷ್ಟ್ರವಾಗಿದೆ ಮತ್ತು ಅದರ ಸರ್ಕಾರವು ಕೃಷಿಯನ್ನು ಉತ್ತೇಜಿಸಲು ಲಕ್ಷಾಂತರ ಸಸ್ಯಗಳನ್ನು ನೀಡಲು ಯೋಜಿಸಿದೆ ನಮ್ಮ ದೇಶದ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳನ್ನು ಉತ್ತೇಜಿಸುವ ಗಾಂಜಾವನ್ನು ಕಾನೂನುಬದ್ಧಗೊಳಿಸುವ ಮತ್ತು ನಿಯಂತ್ರಿಸುವ ಮೂಲಕ ಭಾರತವೂ ಇದನ್ನು ಅನುಸರಿಸಬೇಕು' ಎಂದು ಅಭಿಪ್ರಾಯಿಸಿದ್ದಾರೆ. 

ಗಾಂಜಾವನ್ನು ತೋಟಗಾರಿಕೆ, ವ್ಯಾಪಾರ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಬಹುದು ಇದು ಅಪರಾಧವಲ್ಲ ಎಂದು ಥೈಲ್ಯಾಂಡ್ ನ ಆರೋಗ್ಯ ಸಚಿವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News