ಛತ್ತೀಸ್ ಗಢ: ಕೊಳವೆಬಾವಿಗೆ ಬಿದ್ದ ಬಾಲಕ, ರಕ್ಷಣಾ ಕಾರ್ಯಾಚರಣೆ ಆರಂಭ

Update: 2022-06-11 07:55 GMT
ಸಾಂದರ್ಭಿಕ ಚಿತ್ರ, Photo: ANI

ಜಾಂಜ್‌ಗಿರ್: ಛತ್ತೀಸ್‌ಗಢದ ಜಂಜ್‌ಗಿರ್-ಚಂಪಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ 11 ವರ್ಷದ ಬಾಲಕನೊಬ್ಬ 80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ  ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ನಾಲ್ಕು ಗಂಟೆಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಕರೆಸಲಾಗಿದೆ ಎಂದು ಅಧಿಕಾರಿ ಹೇಳಿದರು.

ರಾಹುಲ್ ಸಾಹು ಎಂಬ ಬಾಲಕ ಮಲ್ಖರೋಡಾ ಡೆವಲಪ್‌ಮೆಂಟ್ ಬ್ಲಾಕ್‌ನಲ್ಲಿರುವ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿದ್ದ ಪಾಳುಬಿದ್ದ ಬೋರ್‌ವೆಲ್‌ಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿದ್ದಿದ್ದಾನೆ  ಎಂದು ಜಾಂಜ್‌ಗೀರ್-ಚಂಪಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರವಾಲ್ ಹೇಳಿದ್ದಾರೆ.

ಬಾಲಕನ ಚೀರಾಟ ಕೇಳಿದ ಕುಟುಂಬಸ್ಥರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಸಂಜೆ 4 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಬಾಲಕನನ್ನು ರಕ್ಷಿಸಲು ಸಮಾನಾಂತರ ಹೊಂಡ ತೋಡಲು ಜೆಸಿಬಿ ಬಳಸಲಾಗುತ್ತಿದೆ. ಎನ್‌ಡಿಆರ್‌ಎಫ್ ಹಾಗೂ  ಎಸ್‌ಡಿಆರ್‌ಎಫ್‌ನ ಸಿಬ್ಬಂದಿಯನ್ನೂ ಕರೆಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News