ಕಳೆದ 3.4 ವರ್ಷದಲ್ಲಿ ಕರ್ನಾಟಕದಲ್ಲಿ 700 ಕ್ಕೂ ಅಧಿಕ ಕೋಮು ವೈಷಮ್ಯ ಪ್ರಕರಣಗಳು; ವರದಿ

Update: 2022-06-11 12:26 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಕಳೆದ ಮೂರುವರೆ ವರ್ಷದಲ್ಲಿ ರಾಜ್ಯದಲ್ಲಿ 700 ಕ್ಕೂ ಹೆಚ್ಚು ಕೋಮು ಹಾಗೂ ಧಾರ್ಮಿಕ ವೈಷಮ್ಯದ‌ ಪ್ರಕರಣಗಳು ವರದಿಯಾಗಿದೆ ಎಂದು TheNewIndianExpress ವರದಿ ಮಾಡಿದೆ. 

ಕರ್ನಾಟಕ ರಾಜ್ಯ ಪೊಲೀಸ್‌ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಕೇವಲ 3.4 ವರ್ಷಗಳಲ್ಲಿ (ಜನವರಿ 2019 ರಿಂದ ಏಪ್ರಿಲ್ 2022 ನಡುವೆ) ಜಾತಿ, ಧರ್ಮ ಸೇರಿದಂತೆ ಕೋಮು ಸಂಬಂಧಿಸಿದ 752 ಕ್ಕೂ ಹೆಚ್ಚು ಪ್ರಕರಣಗಳು (IPC 295 ರಿಂದ 297) ದಾಖಲಾಗಿವೆ ಎಂದು ವರದಿ ಹೇಳಿದೆ. 

2019 ರಲ್ಲಿ ಧಾರ್ಮಿಕ ವೈಷಮ್ಯಕ್ಕೆ ಸಂಬಂಧಿಸಿದ ಅಪರಾಧಗಳು (IPC 295 ರಿಂದ 297 ರ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ) 197 ರಷ್ಟಿತ್ತು. ನಂತರದ ಎರಡು ವರ್ಷಗಳಲ್ಲಿ ಅದು 212 ಮತ್ತು 204 ಕ್ಕೆ ಏರಿತ್ತು. ಆದರೆ, ಈ ವರ್ಷದ ಕೇವಲ ನಾಲ್ಕೇ ತಿಂಗಳಲ್ಲಿ 97 ಕ್ಕೂ ಹೆಚ್ಚು ಧಾರ್ಮಿಕ ವೈಷಮ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News