×
Ad

ಕಲಬುರಗಿ: ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನ ಕೊಲೆಗೆ ಯತ್ನ

Update: 2022-06-11 19:58 IST
ಸಾಂದರ್ಭಿಕ ಚಿತ್ರ

ಕಲಬುರಗಿ: ನಗರದ ಕೆ.ಬಿ.ಎನ್ ಆಸ್ಪತ್ರೆ ಎದುರು ದುಷ್ಕರ್ಮಿಗಳ ತಂಡವೊಂದು ಹಾಡು ಹಗಲೇ ಮಾರಕಾಸ್ತ್ರಗಳಿಂದ ಯುವಕನ ಮೇಲೆ  ಮರಣಾಂತಿಕ ದಾಳಿ ನಡೆಸಿ ಪರಾರಿಯಾಗಿದೆ.

ನಗರದ ಫಿಲ್ಟರ್ ಬೇಡ್ ನಿವಾಸಿ ವಿಜಯ್ ದಾಳಿಗೆ ಒಳಗಾದ ಯುವಕ ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನ ವೇಳೆ ವಿಜಯ್ ಕೆ.ಬಿಎನ್ ಆಸ್ಪತ್ರೆ ಎದುರು ತೆರಳುತಿದ್ದ ವೇಳೆ ಜನಗಳ ಮದ್ಯೆ ದುಷ್ಕರ್ಮಿಗಳು ವಿಜಯ್ ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದೆ ಎನ್ನಲಾಗಿದೆ. 

ಜನನಿಬಿಡ ಪ್ರದೇಶವಾಗಿರುವ ಕೆ.ಬಿ.ಎನ್ ಆಸ್ಪತ್ರೆ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಯಲ್ಲಿ ನಡೆದ ಈ ಘಟನೆ ಪ್ರದೇಶದ ಜನರಲ್ಲಿ ಆತಂಕ ಉಂಟು ಮಾಡಿದೆ. 

ಹಲ್ಲೆಗೆ ಒಳಗಾದ ವಿಜಯ್ ಕೆಲಹೊತ್ತು ರಸ್ತೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತಿದ್ದು, ಬಳಿಕ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಿಮಿಸಿ ತೀವ್ರ ಗಾಯಗಳಿಗೆ ಒಳಗಾದ ವಿಜಯ್ ನನ್ನು ಆಟೋ ಒಂದರಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News