ಪಠ್ಯದಿಂದ ಇಕ್ಬಾಲ್ ವಿರಚಿತ "ಸಾರೇ ಜಹಾಂ ಸೇ ಅಚ್ಛಾ" ಕವಿತೆಗೆ ಕತ್ತರಿ: ಕಾಂಗ್ರೆಸ್ ಆರೋಪ

Update: 2022-06-12 13:04 GMT

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯಪುಸ್ತಕ ವಿವಾದ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಠ್ಯದಿಂದ ಖ್ಯಾತ ಕವಿ ಇಕ್ಬಾಲ್ ವಿರಚಿತ "ಸಾರೇ ಜಹಾಂ ಸೇ ಅಚ್ಛಾ" ಕವಿತೆಯನ್ನೂ ಕಿತ್ತುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ದೇಶಪ್ರೇಮದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ನಕಲಿ ದೇಶಪ್ರೇಮಿಗಳೇ, ನೀವೇ ನೇಮಿಸಿದ ರೋ ಅಹಿತ ಎಂಬ ಮೂರ್ಖಾಧ್ಯಕ್ಷ ಮಕ್ಕಳ ಪಠ್ಯದಿಂದ ಇಕ್ಬಾಲ್ ವಿರಚಿತ "ಸಾರೇ ಜಹಾಂ ಸೇ ಅಚ್ಛಾ" ಎಂಬ ದೇಶಭಕ್ತಿ ಕವಿತೆಯನ್ನು ಕಿತ್ತುಹಾಕಿದ್ದಾನೆ. ಇದರ ವಿರುದ್ಧ ನಿಮ್ಮ ಹೋರಾಟ ಯಾವಾಗ?' ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. 

ಇನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸರ್ಜಿಸಿದ್ದರೂ, ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳು ಒತ್ತಾಯಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News