ಮಗುವಿಗೆ ಅನುಚಿತ ಸ್ಪರ್ಶವೂ ಲೈಂಗಿಕ ದೌರ್ಜನ್ಯ: ಹೈಕೋರ್ಟ್

Update: 2022-06-12 13:21 GMT

ಬೆಂಗಳೂರು, ಜೂ. 12: ಅಪ್ರಾಪ್ತರನ್ನು ಅನುಚಿತವಾಗಿ ಸ್ಪರ್ಶಿಸಿದರೂ ಪೋಕ್ಸೊ ಕಾಯ್ದೆಯ ಸೆಕ್ಷನ್ 7ರ ಅನುಸಾರ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪೋಕ್ಸೊ ಪ್ರಕರಣ ರದ್ದು ಕೋರಿ ಮಾಲೂರು ತಾಲೂಕಿನ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ. 

ವಿಚಾರಣೆ ಆರಂಭವಾದ 3 ವರ್ಷಗಳ ನಂತರ ಆರೋಪ ಪಟ್ಟಿಯಲ್ಲಿ ಸೆಕ್ಷನ್ 7 ಸೇರ್ಪಡೆ ಮಾಡಿರುವುದು ಸರಿಯಲ್ಲವೆಂದು ಅರ್ಜಿದಾರರು ಆಕ್ಷೇಪ ಎತ್ತಿದ್ದರು. ಆದರೆ, ನ್ಯಾಯಪೀಠವು ಸೆಕ್ಷನ್ 216(1)ರ ಪ್ರಕಾರ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಹಂತದಲ್ಲಿ ಬೇಕಾದರೂ ಆರೋಪಪಟ್ಟಿಯಲ್ಲಿ ಅಗತ್ಯ ಅಂಶಗಳನ್ನು ಸೇರಿಸಬಹುದಾಗಿದೆ ಎಂದು ನ್ಯಾಯಪೀಠವು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News