ಕೊಳ್ಳೇಗಾಲದ ಶಿವನ ಸಮುದ್ರದ ಬಳಿ ಯುವಕನ ಹತ್ಯೆ ಪ್ರಕರಣ; ಐವರು ಆರೋಪಿಗಳ ಬಂಧನ

Update: 2022-06-12 14:06 GMT
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಪೊಲೀಸರು

ಕೊಳ್ಳೇಗಾಲ. ಜೂ.12.  ಶಿವನ ಸಮುದ್ರದ ಸಮೀಪದ ಭರಚುಕ್ಕಿ ಜಲಪಾತದ ಬಳಿಯಿರುವ ದರ್ಗಾದಲ್ಲಿ ಮೆ.31ರಂದು ವ್ಯಕ್ತಿವೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದ ಪ್ರಕರಣದ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರದ ಸೈಯದ್ ಸಿಕಂದರ್(35),  ಮುಸಾವೀರ್ ಅಲಯಾಸ್ ಮೂಸಾ(29), ಶೌಕತ್ ಪಾಷ(25), ಹಬೀಬ್ ವುಲ್ಲಾ ಅಲಿಯಾಸ್ ಅಭಿ(19) ಹಾಗೂ ಸೈಯದ್ ಸಲೀಂ(24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಮೇ.31ರಂದು ಮೃತ ಸೈಯದ್ ಮುಜಾಯಿದ್ ಎಂಬಾತನು ಆರೋಪಿ ಸೈಯದ್ ಸಿಕಂದರ್ ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನಲೆ ಸಿಕಂದರ್ ತನ್ನ ಸ್ನೇಹಿತರ ಜೊತೆಗೂಡಿ ಮುಜಾಹಿದ್ ನನ್ನು ಕೊಲೆ ಮಾಡಲು ಸಂಚು ಮಾಡಿ ಶಿವನಸಮುದ್ರದ ದರ್ಗಾ ಬಳಿ ಕರೆ ತಂದು ಚಾಲಕ ಮುಜಾಹಿದ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಯಾವುದೇ ಸುಳಿವು ಇರದೇ ಇದ್ದಂತಹ ಪ್ರಕರಣವನ್ನು ಅತಿ ಕಡಿಮೆ ಸಮಯದಲ್ಲಿ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಯಾವುದೇ ಕುರುಹುಗಳಿಲ್ಲದ ಕೊಲೆ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಬೇಧಿಸಿದ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡಕ್ಕೆ ಎಸ್ಪಿಯವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದರು.

ಇನ್ನು ಪ್ರಕರಣ ಬೇಧಿಸುವಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಆರ್.ಮಂಜುನಾಥ್, ವೀರಣ್ಣಾರಾಧ್ಯ, ಚೇತನ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್  ವಸಿಷ್ಠ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್,ಡಿವೈಎಸ್ಪಿ ನಾಗರಾಜು, ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಉಪನಿರೀಕ್ಷಕರುಗಳಾದ ಮಂಜುನಾಥ್, ಚೇತನ್, ವೀರಣಾರದ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News