ಕೇಂದ್ರ ಸರ್ಕಾರದ ಸಾಲು ಸಾಲು ವೈಫಲ್ಯ, ಪತ್ರಿಕೆಗಳ ಹೆಡ್ ಲೈನ್ ಬದಲಿಸಲು ರಾಹುಲ್ ವಿರುದ್ಧ 'ಈಡಿ ಮೋರ್ಚಾ': ಕಾಂಗ್ರೆಸ್

Update: 2022-06-13 08:00 GMT

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸಲು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಈಡಿ)ಸಮನ್ಸ್ ನೀಡಿದ್ದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. 

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''IT, ED, CBI ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಬಿಜೆಪಿಯ ನೀಚತನದ ರಾಜಕಾರಣಕ್ಕೆ ಸಾಕ್ಷಿ. IT ED ಯಂತಹ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹತ್ತಿಕುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಪಿಯ ಮೂರ್ಖತನವಷ್ಟೇ'' ಎಂದು ಕಿಡಿಗಾರಿದೆ. 

''ದೇಶದ ಆರ್ಥಿಕ ದುಸ್ಥಿತಿ, ಬೆಲೆ ಏರಿಕೆ, ಚೀನಾ ಅತಿಕ್ರಮಣ, ಕಾಶ್ಮೀರ ಪಂಡಿತರ ಹತ್ಯೆ ಮುಂತಾದ ಕೇಂದ್ರ ಸರ್ಕಾರದ ಸಾಲು ಸಾಲು ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯ. ಹಾಗಾಗಿ ಪತ್ರಿಕೆಗಳ ಹೆಡ್ ಲೈನ್ ಬದಲಿಸಲು ರಾಹುಲ್ ಗಾಂಧಿ ಅವರ ವಿರುದ್ಧ 'ಈಡಿ ಮೋರ್ಚಾ'ವನ್ನ ಮುಂದೆ ಬಿಟ್ಟಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಬಿಜೆಪಿಯ ಸೇಡಿನ ರಾಜಕೀಯವನ್ನು ಖಂಡಿಸಿ ಇಂದು (ಸೋಮವಾರ) ಬೆಳಿಗ್ಗಿನಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News