×
Ad

ಕಲಬುರಗಿ; ಚರಂಡಿ ವಿಚಾರಕ್ಕೆ ಜಗಳ: ತಂಡದಿಂದ ಯುವಕನ ಕೊಲೆ, ಆರು ಮಂದಿಗೆ ಗಂಭೀರ ಗಾಯ

Update: 2022-06-13 14:09 IST
ವಿಶ್ವನಾಥ ಸಂಗಾವಿ

ಕಲಬುರಗಿ: ಚರಂಡಿ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಚಿತ್ತಾಪುರ ತಾಲೂಕಿನ‌ ಮುಡಬೂಳ ಗ್ರಾಮದ ಬಾಗಿಲು ವಿಶ್ವನಾಥ ಸಂಗಾವಿ (32) ಕೊಲೆಯಾದ ಯುವಕ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ನಿನ್ನೆ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು‌. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ಕೂಡಾ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಪರಿಣಾಮ ತಂಡವೊಂದು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.

ವಿಶ್ವನಾಥ ಸಂಗಾವಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಗಾವಿಯ ಮನೆಯ ಆರು ಜನರು ಗಂಭೀರ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಚಿತ್ತಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News