×
Ad

ಪದವಿ ಪ್ರವೇಶ ಪ್ರಕ್ರಿಯೆ: ಆನ್‍ಲೈನ್ ಮೂಲಕವೇ ನಡೆಸಲು ವಿವಿಗಳಿಗೆ ಸೂಚನೆ

Update: 2022-06-13 20:21 IST

ಬೆಂಗಳೂರು, ಜೂ.13: 2022—23ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆನ್‍ಲೈನ್ ವಿಧಾನದ ಮೂಲಕವೇ ನಡೆಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಲೇಜು ಶಿಕ್ಷಣ ಇಲಾಖೆ, ವಿವಿಗಳು ಮತ್ತು ವಿವಿ ಕಾಲೇಜುಗಳು ಇದಕ್ಕಾಗಿ https://uucms.karnataka.gov.in/ ವಿಳಾಸವನ್ನು ತಮ್ಮ ವೆಬ್ ಸೈಟುಗಳಲ್ಲಿ ಲಿಂಕ್ ಮಾಡಿ, ಲಭ್ಯವಾಗುವಂತೆ ಮಾಡಬೇಕು. ಜತೆಗೆ ಎಲ್ಲ ಕಾಲೇಜುಗಳೂ ಪ್ರವೇಶಾತಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಬೇಕು' ಎಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News