ತುಕಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ರಾಜ್ಯದಲ್ಲಿ ಬರಗೂರು ಸಮಿತಿ ಮಾಡಿದೆ: ಸಚಿವ ಬಿಸಿ ನಾಗೇಶ್
ದಾವಣಗೆರೆ: 'ತುಕಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ನಮ್ಮ ರಾಜ್ಯದಲ್ಲಿ ಬರಗೂರು ಸಮಿತಿ ಮಾಡಿದೆ' ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಜೆಎನ್ ಯು ಇತಿಹಾಸ ತಜ್ಞರ ಪತ್ರ ಬರೆದಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಎನ್‌ಯುನಲ್ಲಿ ಇರುವುದು ತುಕುಡೆ ಗ್ಯಾಂಗ್. ಪಾಕಿಸ್ತಾನದ ಧ್ವಜ ಹಾರಿಸುವ ಗ್ಯಾಂಗ್ . ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಜೆಎನ್‌ಯು ಪ್ರೊಫೆಸರ್ ಪತ್ರ ಬರೆದಿರುವುದು ಕೂಡ ಇದೇ ಕಾರಣಕ್ಕೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.
''ಇದೇ ಗ್ಯಾಂಗ್ ಬರಗೂರು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಹಿಂದೆ ಇರುವುದು. ಪಠ್ಯಪುಸ್ತಕ ಸಮಿತಿಯಲ್ಲಿ ಜೆಎನ್ ಯು ಪ್ರಾಧ್ಯಾಪಕರೂ ಇದ್ದರು. ಭಾರತವನ್ನ ಒಡೆಯುವ ಹಾಗೂ ಹಿಂದೂ ಸಮಾಜವನ್ನ ಒಡೆಯುವ ದೊಡ್ಡ ಗ್ಯಾಂಗ್ ಜೆಎನ್ ಯು ನಲ್ಲಿದೆ' ಎಂದು ದೂರಿದರು.
ಶೇ 75 ರಷ್ಟು ಪುಸ್ತಕ ವಿತರಣೆ
ಈಗಾಗಲೇ ಶೇ. 75 ರಷ್ಟು ಪುಸ್ತಕ ವಿತರಣೆ ಮಾಡಿ ಆಗಿದೆ. ಬರಗೂರ ಸಮಿತಿಯಲ್ಲಿ ಬಸವಣ್ಣವರ ಬಗ್ಗೆ ಏನಿತ್ತು ಅದು ಈಗಲೂ ಇದೆ. ಬಸವಣ್ಣವರ ಬಗ್ಗೆ ಏನು ಅವಮಾನ ಆಗಿದೆ ಎಂದು ಪ್ರಶ್ನೆ ಮಾಡಿದ ನಾಗೇಶ್. ಬರಗೂರ ಸಮಿತಿಯಲ್ಲಿ ಬಸವಣ್ಣ ಉಪನಯನ ಮಾಡಿಕೊಂಡು ಹೋದರು ಅಂತಾ ಇದೆ. ನಾಲ್ಕು ವರ್ಷ ಆಗದ ಗೊಂದಲ ಈಗ ಏಕೆ ಎಂದರು.