ಆನೆಗಳ ದತ್ತು ಸ್ವೀಕಾರಕ್ಕೆ ಕಾಯ್ದೆಯಲ್ಲಿ ನಿರ್ಬಂಧವಿಲ್ಲ: ಹೈಕೋರ್ಟ್
Update: 2022-06-14 18:52 IST
ಬೆಂಗಳೂರು, ಜೂ.14: ಖಾಸಗಿ ಮಾಲಕತ್ವದ ಆನೆಗಳನ್ನು ವಾಣಿಜ್ಯ ಉದ್ದೇಶ ಹೊಂದಿರದ ಚಟುವಟಿಕೆಗಳಿಗೆ ಬಳಸುವುದಕ್ಕಾಗಿ ದತ್ತು ಪಡೆಯಲು ಯಾವುದೇ ರೀತಿಯ ನಿರ್ಬಂಧ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಆನೆಗಳ ದತ್ತು ಸ್ವೀಕಾರಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದೆ.
ಕರ್ನಾಟಕದಿಂದ ಗುಜರಾತ್ ರಾಜ್ಯದ ರಾಧಾಕೃಷ್ಣ ದೇವಸ್ಥಾನದ ಟ್ರಸ್ಟ್ ಗೆ ಖಾಸಗಿ ಮಾಲಕ್ವತದ 4 ಆನೆಗಳನ್ನು ದತ್ತು ನೀಡಿರುವುದನ್ನು ಪ್ರಶ್ನಿಸಿ ಎಂ.ಎಸ್.ಮುರುಳಿ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಆದೇಶ ನೀಡಿದೆ.
ಗುಜರಾತ್‍ನ ಜಾಮ್‍ನಗರದಲ್ಲಿ ಪ್ರಾಣಿಗಳ ಕಲ್ಯಾಣ ಉದ್ದೇಶದಿಂದಲೇ ಟ್ರಸ್ಟ್ ರಚನೆಯಾಗಿದೆ. ಆನೆಗಳನ್ನೂ ಉತ್ತಮವಾಗಿ ಆರೈಕೆ ಮಾಡುತ್ತಾರೆ. ಅಲ್ಲದೆ, ಆ ಆನೆಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.