ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಓಡುವ ಸ್ಫರ್ಧೆಯಲ್ಲಿ ಉತ್ತಮ ಭವಿಷ್ಯ ಇದೆ: ಸಿ.ಟಿ.ರವಿ
ಚಿಕ್ಕಮಗಳೂರು, ಜೂ.14: 'ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಗೆ ಉಜ್ವಲ ಭವಿಷ್ಯವಿದೆ, ಆದರೆ ರಾಜಕೀಯದಲ್ಲಿ ಅಲ್ಲ, ಓಡುವ ಸ್ಫರ್ಧೆಯಲ್ಲಿ. ನಾನು ನೋಡ್ತಾ ಇದ್ದೆ ಕ್ಷಣಮಾತ್ರದಲ್ಲಿ ಮಿಂಚಿನ ಓಟ. ಅಥ್ಲೆಟಿಕ್‍ಗೆ ಹೋದರೇ ಪ್ರಶಸ್ತಿ ಖಂಡಿತ ಸಿಗುತ್ತೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನಾನು ಚಳುವಳಿ ಮೂಲಕ ಬಂದವನು ಜೈಲಿಗೆ ಹೋಗಿದ್ದೇನೆ. ಅನೇಕ ಪೊಲೀಸ್ ಠಾಣೆಯಲ್ಲಿ ಒದೆ ತಿಂದಿದ್ದೇನೆ. ಪೊಲೀಸರಿಗೆ ಬೆನ್ನು ತೋರಿಸಿ ಯಾವತ್ತೂ ಓಡಿ ಹೋಗಿಲ್ಲ. ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಶ್ರೀನಿವಾಸ್ ಮಾದರಿ' ಎಂದು ಲೇವಡಿಯಾಡಿದರು.
ಸಂವಿಧಾನ ಮತ್ತು ಕಾನೂನಿಗಿಂತ ನಾವೇ ದೊಡ್ಡವರು ಎಂದು ಭಾವಿಸಿರುವ ಕಾಂಗ್ರೆಸ್‍ನವರು ಇಡಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
ಹಿಂದೆ ನರೇಂದ್ರ ಮೋದಿ ಅವರು ಸಿಎಂ ಆಗಿದ್ದಾಗ ಸಣ್ಣ ಶಬ್ಧವನ್ನು ಮಾಡದೆ 9 ಗಂಟೆಗಳ ಕಾಲ ಎಸ್‍ಐಟಿ ಮುಂದೆ ತನಿಖೆಗೆ ಹಾಜರಾಗಿದ್ದರು. ಪ್ರತಿಭಟನೆ ಮಾಡುವುದರಿಂದ ಇಡಿ ತನಿಖೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಕಾಂಗ್ರೆಸ್‍ನವರು ಭಾವಿಸಿದ್ದಾರೆ. ಇದು ಅವರ ಮಾನಸಿಕ ದೌಬಲ್ಯವನ್ನು ತೋರಿಸುತ್ತದೆ. ಸಂವಿಧಾನಕ್ಕಿಂತ ನಾವು ದೊಡ್ಡವರು ಎನ್ನುವ ಮಾನಸಿಕತೆ ದೇಶದ ಹಿತಕ್ಕೆ ಪೂರಕವಲ್ಲ ಎಂದರು.
1057 ಜನ ಸ್ವಾತಂತ್ರ್ಯ ಹೋರಾಟಗಾರರು 1937ರಲ್ಲಿ ಷೇರು ಹಾಕಿ ಕಟ್ಟಿದಂತಹ ಸಂಸ್ಥೆಯು ಇನ್ನೊಂದು ಸಂಸ್ಥೆಗೆ ಹಣ ವರ್ಗಾವಣೆ ಮಾಡಲು ಷೇರುದಾರರ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಚಾರ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದಾ?, ಗಾಂಧಿ ಹೆಸರು ಇಟ್ಟುಕೊಂಡು ಮಹಾತ್ಮ ಗಾಂಧಿ ಹೆಸರಿಗೆ ಕಾಂಗ್ರೆಸ್‍ನವರು ಅಪಚಾರ ಮಾಡುತ್ತಿದ್ದಾರೆ. ನಿಜವಾಗಿ ಇವರು ಗಾಂಧಿ ಕುಟುಂಬದವರಲ್ಲ, ಒರ್ಜಿನಲಿ ರಾಹುಲ್ ಗಾಂಧಿ ಕುಟುಂಬದವರ ಗ್ಯಾಂಡಿ ಕುಟುಂಬದವರಾಗಿದ್ದಾರೆ, ಆದರೆ ಜನ ಇವರನ್ನು ಗಾಂಧಿ ಕುಟುಂಬದವರು ಎಂದು ತಿಳಿದಿದ್ದಾರೆ. ಗಾಂಧಿ ಸತ್ಯದ ಪರ ಸತ್ಯಾಗ್ರಹ ಮಾಡಿದ್ದರು. ಇವರು ಭ್ರಷ್ಟಚಾರ ಮುಚ್ಚಿಹಾಕಲು ಚಳವಳಿ ಮಾಡುತ್ತಿದ್ದಾರೆ ಎಂದರು.
ಭ್ರಷ್ಟಾಚಾರದ ಸಮರ್ಥನೆ ಮಾಡಿಕೊಳ್ಳಲು ಚಳವಳಿ ಮಾಡಿದ್ರ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಕಾನೂನು ಪದವಿ ಓದುವಾಗ ಇದನ್ನೇ ಕಲಿತ್ತಿದ್ದ. ಸಂವಿಧಾನದ ಬಗ್ಗೆ ವಿಧಾನ ಸಭೆಯಲ್ಲಿ ಪಾಠ ಮಾಡುತ್ತಿದ್ದರಲ್ಲ ಭ್ರಷ್ಟರಿಗೆ ರಕ್ಷಣೆ ಕೊಡಿ ಎಂದು ಅಂಬೇಡ್ಕರ್ ಹೇಳಿದ್ದಾರಾ, ದೊಡ್ಡವರು ಭ್ರಷ್ಟಚಾರ ನಡೆಸಿದರೇ ಅವರ ಸಮರ್ಥನೆಗೆ ನಿಲ್ಲಬೇಕೆಂದು ಮೆಸ್ಟ್ರು ಸಿದ್ದರಾಮಯ್ಯ ಅವರಿಗೆ ಹೇಳಿಕೊಟ್ಟಿದ್ದಾರಾ? ಎಂದ ಅವರು, ಭ್ರಷ್ಟರ ರಕ್ಷಣೆಯೇ ನನ್ನ ಪರಮ ಧ್ಯೇಯ ಅಂದುಕೊಂಡಂತೆ ಅವರ ನಡಳಿವಕೆ ಇದೆ ಎಂದು ವಾಗ್ದಾಳಿ ನಡೆಸಿದರು.