ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ; ಗೊಂದಲ ಮೂಡಿಸಿದ 2 ಹೆಚ್ಚುವರಿ ಮತಗಳು

Update: 2022-06-15 06:16 GMT
ಸಾಂದರ್ಭಿಕ ಚಿತ್ರ

ಬೆಳಗಾವಿ:  ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ.13ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯವು ನಡೆಯುತ್ತಿದ್ದು,  ಬೆಳಗಾವಿ ನಗರದ ಜ್ಯೋತಿ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಿಕ್ಕಿರುವ ಎರಡು ಹೆಚ್ಚುವರಿ ಮತಗಳು ಗೊಂದಲ ಮೂಡಿಸಿದೆ. 

ಪಶ್ಚಿಮ ಶಿಕ್ಷಕರ ಮತಕ್ಷೇತ್ರದ  ಒಟ್ಟು 77 ಮತಗಟ್ಟೆಗಳ ಮತಪೆಟ್ಟಿಗೆಯನ್ನು ತೆರೆದು ಮತ ಎಣಿಕೆ ಮಾಡಲಾಗಿತ್ತು. ಈ ವೇಳೆ ಹುಬ್ಬಳ್ಳಿಯ ರೋಟರಿ ಶಾಲೆ ಮತಗಟ್ಟೆಯ ಪೆಟ್ಟಿಗೆಯಲ್ಲಿ ಹೆಚ್ಚುವರಿ 2 ಮತಗಳು ಸಿಕ್ಕಿದೆ ಎಂದು ತಿಳಿದು ಬಂದಿದೆ. ಅಲ್ಲಿ 757 ಮತಗಳು ಚಲಾವಣೆಗೊಂಡಿದ್ದರೆ, 759 ಗಳು ಮತ ಪೆಟ್ಟಿಗೆಯಲ್ಲಿ ಸಿಕ್ಕಿದೆ. 

ಅಭ್ಯರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಚುನಾವಣಾ ಅಧಿಕಾರಿಗಳು ಮರು ಮತ ಎಣಿಕೆ ಮಾಡಿದರೂ 2 ಮತಗಳು ಹೆಚ್ಚಿಗೆ ಬಂದಿದೆ. ಇದರಿಂದ  ಚುನಾವಣಾ ಅಧಿಕಾರಿಗಳು ಅಲ್ಲಿನ ಮತಗಳ ಸಂಖ್ಯೆಯನ್ನು 759 ಎಂದೇ ದಾಖಲಿಸಿದ್ದಾರೆ. 

ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ವಾಯವ್ಯ ಶಿಕ್ಷಕರು, ಪದವೀಧರರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. 

ದಕ್ಷಿಣ ಪದವೀಧರ ಕ್ಷೇತ್ರ:  ಮೈಸೂರಿನ  ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News