ದಕ್ಷಿಣ ಪದವೀಧರ ಕ್ಷೇತ್ರ; ಮಧು ಜಿ.ಮಾದೇಗೌಡ ಜಯಭೇರಿ

Update: 2022-06-16 09:37 GMT
ಮಧು ಜಿ.ಮಾದೇಗೌಡ

ಮೈಸೂರು: ವಿಧಾನಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ನಗರದ ಮೈಸೂರು-ಹುಣಸೂರು ರಸ್ತೆಯ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರವೂ ಮತಗಳ ಎಣಿಕೆ ಕಾರ್ಯ ನಡೆದು ಅಂತಿಮವಾಗಿ ಕಾಂಗ್ರೆಸ್ ನ  ಮಧು ಜಿ.ಮಾದೇಗೌಡ 12, 205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಜೂ.13ರ ಸೋಮವಾರ ಮತದಾನ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ 19 ಮಂದಿ ಕಣದಲ್ಲಿದ್ದರು. ಜೂ.15 ರ ಬುಧವಾರ ಮತ ಎಣಿಕೆ ಆರಂಭವಾಗಿದ್ದು ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸುವ ಹಿನ್ನಲೆಯಲ್ಲಿ ಮತಗಳ ಎಣಿಕೆ ಗುರುವಾರವೂ ಮುಂದುವರಿದಿತ್ತು.

ಬುಧವಾರ ತಡರಾತ್ರಿ ವರೆಗೆ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆದಿದ್ದು, ನಂತರ ಎರಡನೇ ಪ್ರಾಶಸ್ತ್ಯದ ಎಣಿಕೆ ನಡೆಸಲಾಯಿತು. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಎಣಿಕೆ ಮುಂದುವರಿದು ಕಣದಲ್ಲಿದ್ದ ರೈತ ದಲಿತ ಸಂಘರ್ಷ ಸಮಿತಿಯ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ, ಬಿಎಸ್ಪಿ ಬೆಂಬಲಿತ ಚನ್ನಜೇಶವಮೂರ್ತಿ ಸೇರಿದಂತೆ 16 ಮಂದಿ ಎಲಿಮಿನೇಟ್ ಆದರು.

ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಪಡೆದ ಒಟ್ಟು 45275 ಮತ ಪಡೆದು ಗೆಲುವಿಗೆ ನಿಗದಿಯಾದ 46083 ಮತಗಳ  ಕೋಟಾವನ್ನು ತಲುಪಲು 808 ಮತಗಳ ಕೊರತೆ ಎದುರಾಗಿತ್ತು.  ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಮತ ಪಡೆಯಲಾಯ್ತು

ಆ ಮೂಲಕ ನಿಗದಿತ  ಕೋಟಾ ತಲುಪಿದ ಕೈ ಅಭ್ಯರ್ಥಿ ಬಿಜೆಪಿಯ ಒಟ್ಟು 33878 ಮತ ಪಡೆದು ಬಿಜೆಪಿಯ ಮೈ.ವಿ. ರವಿಶಂಕರ್ ಸೋಲಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19630 ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ.

ಎರಡನೇ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಮಧು ಜಿ.ಮಾದೇಗೌಡ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಖಾತೆ ತೆರೆದಿದೆ.

ಇದನ್ನೂ ಓದೆ... ವಾಯುವ್ಯ ಶಿಕ್ಷಕರ ಕ್ಷೇತ್ರ; ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಜಯಭೇರಿ

ಇದನ್ನೂ ಓದಿ... ವಾಯವ್ಯ ಪದವೀಧರ ಕ್ಷೇತ್ರ; ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿಗೆ ಗೆಲುವು 

ಇದನ್ನೂ ಓದೆ... ಪಶ್ಚಿಮ ಶಿಕ್ಷಕರ ಕ್ಷೇತ್ರ; ಸತತ 8ನೇ ಬಾರಿಗೆ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News