×
Ad

'ಕರುಣೆಯಿರಲಿ' ಎಂದವರು ದೇಶದ್ರೋಹಿಗಳು, 'ಗೋಲಿಮಾರೋ' ಎನ್ನುವವರು ಹೀರೋಗಳು: ಸಾಯಿಪಲ್ಲವಿಗೆ ನಟಿ ರಮ್ಯಾ ಬೆಂಬಲ

Update: 2022-06-16 15:03 IST
ರಮ್ಯಾ / ಸಾಯಿಪಲ್ಲವಿ (Photo: instagram)

ಬೆಂಗಳೂರು: ಕಾಶ್ಮೀರಿ ಪಂಡಿತರ ಹತ್ಯಾಂಕಾಂಡದಂತೆಯೇ ಬಡ ದನ ಸಾಗಾಟಗಾರರನ್ನು ಥಳಿಸಿ ಕೊಲ್ಲುವುದೂ ಹಿಂಸೆಯಾಗಿದೆ ಎಂದು ಬಹುಭಾಷಾ ನಟಿ ಸಾಯಿಪಲ್ಲವಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಬಲಪಂಥೀಯರು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಟಿಯ ತಿರುಚಿದ ಫೋಟೊಗಳನ್ನು ಪ್ರಕಟಿಸಿ ಅವರನ್ನು ಅವಹೇಳಿಸಿದ್ದರು. ಇದೀಗ ಈ ಬಗ್ಗೆ ಕನ್ನಡ ನಟಿ ರಮ್ಯಾ ಸಾಯಿಪಲ್ಲವಿಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. 

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ ರಮ್ಯಾ "ಸಾಯಿ ಪಲ್ಲವಿ ವಿರುದ್ಧದ ಟ್ರೋಲ್‌ ಗಳು ಹಾಗೂ ಬೆದರಿಕೆಗಳು ನಿಲ್ಲಬೇಕಾಗಿದೆ. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹತೆ ಇದೆಯೇ ಅಥವಾ ಮಹಿಳೆಯರಿಗೆ ಮಾತ್ರ ಇಲ್ಲವೇ? ಆಕೆ ಹೇಳಿದ್ದನ್ನು ಯಾವುದೇ ಸಭ್ಯ ಮನುಷ್ಯ, ತುಳಿತಕ್ಕೊಳಗಾದವರನ್ನು ರಕ್ಷಿಸುವ ಸಲುವಾಗಿ ಹೇಳುತ್ತಾನೆ. ಒಬ್ಬರ ಅಭಿಪ್ರಾಯವನ್ನು ಅವರನ್ನು ನಿಂದಿಸದೆಯೇ ವಿರೋಧಿಸಬಹುದಾಗಿದೆ. 

" ‘ದಯೆಯಿಂದಿರಿ’ ‘ಒಳ್ಳೆಯ ಮನುಷ್ಯರಾಗಿರಿ’ ಎಂದು ಹೇಳಿದರೆ ದೇಶವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಮತ್ತು ‘ಗೋಲಿ ಮಾರೋ’ ಎಂದು ಹೇಳಿ ದ್ವೇಷ ಉಗುಳುವವರನ್ನು ನಿಜವಾದ ಹೀರೋಗಳೆಂದು ಗುರುತಿಸಲಾಗುತ್ತದೆ. ನಾವು ಯಾವ ರೀತಿಯ ತಿರುಚಿದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News