ಪಿಎಸ್‍ಐ ಅಕ್ರಮ ನೇಮಕಾತಿ: ಶಾಂತಿಬಾಯಿ ದಂಪತಿ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

Update: 2022-06-16 16:10 GMT

ಬೆಂಗಳೂರು, ಜೂ.16: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪರೀಕ್ಷಾರ್ಥ ಅಭ್ಯರ್ಥಿ ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾನಾಯಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ 3ನೆ ಜೆಎಂಎಫ್‍ಸಿ ಕೋರ್ಟ್ ವಜಾಗೊಳಿಸಿದೆ.

545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಾರಿ ಅಕ್ರಮ ನಡೆದಿದ್ದು, ಇದರಲ್ಲಿ ಭಾಗಿಯಾದ್ದ ಪರೀಕ್ಷಾರ್ಥ ಅಭ್ಯರ್ಥಿಗಳು, ಪೆÇಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಬಂಧಿಸಲಾಗಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಶಾಂತಿಬಾಯಿ ಮತ್ತು ಪತಿ ಬಸ್ಯಾನಾಯಕ ದಂಪತಿ ತಮ್ಮ ಮಗುವಿನೊಂದಿಗೆ ಊರು ತೊರೆದಿದ್ದರು. ಪ್ರಕರಣ ನಡೆದು ಹಲವು ದಿನಗಳ ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಾಂತಿಬಾಯಿ ಪರೀಕ್ಷೆ ಬರೆದಿದ್ದು, ಹಣ ನೀಡಿ ಒಎಮ್‍ಆರ್ ಶೀಟ್‍ನಲ್ಲಿ ನಕಲು ಮಾಡಿ ಪಿಎಸ್‍ಐನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನೇಮಕವಾಗಿದ್ದರು ಎಂಬ ಆರೋಪದಡಿ ಇವರನ್ನು ಬಂಧಿಸಲಾಗಿದೆ. ಇದೀಗ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News