ಇಸ್ಕಾನ್ ಸಂಸ್ಥೆಗೆ ಜಮೀನು ಮಂಜೂರು: ಸರಕಾರದ ನಿಲುವು ಕೇಳಿದ ಹೈಕೋರ್ಟ್

Update: 2022-06-16 16:29 GMT

ಬೆಂಗಳೂರು, ಜೂ.16: ಇಸ್ಕಾನ್ ಸಂಸ್ಥೆಗೆ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಜಮೀನು ಮಂಜೂರಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಜಮೀನು ಹರಾಜಿನ ಬದಲು ಹೇಗೆ ಮಂಜೂರಾತಿ ಮಾಡುತ್ತೀರಿ ಎಂಬುದರ ಕುರಿತಂತೆ ನಿಲುವು ತಿಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಜಮೀನು ಮಂಜೂರಾತಿ ವಿರೋಧಿಸಿ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸೂಚನೆ ನೀಡಿದೆ. 

ಈಗಾಗಲೇ 77 ಎಕರೆ ಕೃಷಿ ಭೂಮಿ ಖರೀದಿಸಿ ಆರ್ಗಾನಿಕ್ ಫಾರ್ಮಿಂಗ್ ನಡೆಸುತ್ತಿರುವ ಇಸ್ಕಾನ್ ಮತ್ತಷ್ಟು ಜಮೀನು ಮಂಜೂರು ಮಾಡುವಂತೆ ಸರಕಾರಕ್ಕೆ 1998ರಲ್ಲೇ ಅರ್ಜಿ ಸಲ್ಲಿಸಿದೆ. 

ಜಮೀನು ಮಂಜೂರಿಗೆ ನಿರ್ಬಂಧ ಕೋರಿರುವ ಅರ್ಜಿದಾರರು ಈ ಬಗ್ಗೆ ಶ್ರೀರಂಗಪಟ್ಟಣದ ತಹಶೀಲ್ದಾರ್, ಪಾಂಡವಪುರದ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News