×
Ad

ದಲಿತ ಮುಖಂಡ ಹತ್ಯೆ ಪ್ರಕರಣ; ಆರೋಪಿ ಬಂಧನಕ್ಕೆ ದಸಂಸ ಒತ್ತಾಯ

Update: 2022-06-17 17:37 IST

ಚಿಕ್ಕಮಗಳೂರು, ಜೂ.17: ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ನರಸಿಂಹಮೂರ್ತಿ ಅವರನ್ನು ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಬಣ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಮನವಿ ಸಲ್ಲಿಸಿದ ದಸಂಸ ಪದಾಧಿಕಾರಿಗಳು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗುಬ್ಬಿಯಲ್ಲಿ ದಲಿತರ ಸಂಘದ ಸಮಿತಿ ಜಿಲ್ಲಾ ಮುಖಂಡರಾಗಿ ನರಸಿಂಹಮೂರ್ತಿ ಅವರು ಪ್ರಾಮಾಣಿಕ ಹಾಗೂ ಬಡವರಪರವಾದ ಹೋರಾಟಗಳನ್ನು ಮಾಡುತ್ತಾ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಅವರ ಹತ್ಯೆಯಿಂದ ಅವರ ಕುಟುಂಬ ಹಾಗೂ ದಲಿತ ಸಮುದಾಯಕ್ಕೆ ನೋವುಂಟಾಗಿದೆ ಎಂದು ತಿಳಿಸಿದರು.

ಆದ್ದರಿಂದ ಕೂಡಲೇ ನರಸಿಂಹಮೂರ್ತಿ ಅವರ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸ ಬೇಕು, ಅವರ ಕುಟುಂಬಕ್ಕೆ ಪರಿಹಾರ ಹಾಗೂ ಒಂದು ಸರ್ಕಾರಿ ಉದ್ಯೋಗವಾಗಲೀ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್Àಕುಮಾರ್. ಮುಖಂಡರುಗಳಾದ ಮುರುಗೇಶ್, ಪ್ರಕಾಶ್, ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News