21 ಅಧಿಕಾರಿಗಳ ಮೇಲೆ ಎಸಿಬಿ ದಾಳಿ; ಕೋಟ್ಯಂತರ ರೂ. ನಗ, ನಗದು ಜಪ್ತಿ
ಬೆಂಗಳೂರು, ಜೂ.17: ಆದಾಯಕ್ಕಿಂತ ಅಧಿಕ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ಇಬ್ಬರು ನಿವೃತ್ತ ಅಧಿಕಾರಿಗಳು ಸೇರಿದಂತೆ ಒಟ್ಟು 21 ಸರಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಅಕ್ರಮ ಸಂಪತ್ತು ಬಯಲಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಮುಂಜಾನೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 80 ಸ್ಥಳಗಳ ಮೇಲೆ ಬರೋಬ್ಬರಿ 555 ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.ಆನಂತರ, ಭ್ರಷ್ಟಾ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಪತ್ತೆಯಾದ ಚಿನ್ನಾಭರಣ, ಆಸ್ತಿದಾಖಲೆ, ನಗದು ಸೇರಿದಂತೆ ಇನ್ನಿತರೆ ವಸ್ತುಗಳ ಮೌಲ್ಯ ಪಟ್ಟಿ ಮಾಡಿದರು.
ಇದನ್ನೂ ಓದಿ... ಎಸಿಬಿ ದಾಳಿ | ಉಡುಪಿಯ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಯಲ್ಲಿ ಅಪಾರ ಚಿನ್ನಾಭರಣ ಪತ್ತೆ!
►ಇಲ್ಲಿನ ಶಿವಮೊಗ್ಗ ಜಿಲ್ಲೆಯ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ ಉಪ ಮುಖ್ಯ ಎಲೆಕ್ಟ್ರೀಕಲ್ ಇನ್ಸ್‍ಪೆಕ್ಟರ್ ಡಿ.ಸಿದ್ದಪ್ಪ ಅವರ ಎಲ್‍ಬಿಎಸ್ ನಗರದಲ್ಲಿರುವ ನಿವಾಸ, ಹೊನ್ನಾಳಿ ತಾಲೂಕಿನ ಎಚ್.ಗೋಪಗೊಂಡನಹಳ್ಳಿ ಗ್ರಾಮದ ವಾಸದ ಮನೆ ಮೇಲೆ ದಾಳಿ ನಡೆಸಿದಾಗ ಬೆಂಗಳೂರಿನಲ್ಲಿ 2 ಮನೆ, ಹೊನ್ನಹಳ್ಳಿಯಲ್ಲಿ 7 ನಿವೇಶನ, ಹುಟ್ಟೂರು ಗೋಪದೊಂಡನಹಳ್ಳಿಯಲ್ಲಿ 8 ಎಕರೆ ಜಮೀನು, ತಾವರೆಚಟ್ಟನಹಳ್ಳಿಯಲ್ಲಿ 1 ಎಕರೆ 7 ಗುಂಟೆ ಜಮೀನು ಕಾರು, ಒಂದು ಬೈಕ್, 1 ಕೆಜಿ ಚಿನ್ನ, 7 ಲಕ್ಷ ನಗದು ಪತ್ತೆಯಾಗಿದೆ.
►ಬಿಡಿಎ ಬನಶಂಕರಿ ಕಚೇರಿಯಲ್ಲಿ ಎಇಇ ಶಿವಲಿಂಗಯ್ಯ ಗಾರ್ಡನರ್ ಅವರ ದೊಡ್ಡಕಲ್ಲಸಂದ್ರದಲ್ಲಿನ ನಿವಾಸ ಸೇರಿದಂತೆ ಮೂರ ಕಡೆಗಳಲ್ಲಿ ದಾಳಿ ನಡೆಸಿದಾಗ ಬೆಂಗಳೂರಿನಲ್ಲಿ 3 ಮನೆ, 5 ಖಾಲಿ ನಿವೇಶನ, ಮೈಸೂರು ಬೆಂಗಳೂರು ಕಾರಿಡಾರ್‍ನಲ್ಲಿ (ಚನ್ನಪಟ್ಟಣ) 1 ಎಕರೆ 10 ಗುಂಟೆ ಭೂಮಿ, ಅದೇ ಭಾಗದಲ್ಲಿ 10 ಗುಂಟೆ ವಾಣಿಜ್ಯ ಚಟುವಟಿಕೆಯ ಜಾಗ ಮತ್ತು 1.10 ಎಕರೆ ಭೂಮಿ ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ.
►ಬೆಂಗಳೂರು ಉತ್ತರ ವಿವಿಯ ನಿವೃತ್ತ ರಿಜಿಸ್ಟ್ರ್ರಾರ್(ಮೌಲ್ಯಮಾಪನ) ಡಾ.ಕೆ.ಜನಾರ್ದನ್ ಅವರ ವಿಡಿಯಾ ಲೇಔಟ್‍ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದಾಗ 4 ಲಕ್ಷ ನಗದು ಅಂದಾಜು 1 ಕೆಜಿ ಚಿನ್ನ,3 ಕೆಜಿ ಬೆಳ್ಳಿ ಆಭರಣಗಳು, ಕಸ್ತೂರ್‍ಬಾ ರಸ್ತೆಯಲ್ಲಿ ಪುತ್ರನ ಹೆಸರಿನಲ್ಲಿ ರೆಸ್ಟೋರೆಂಟ್ ನಿರ್ಮಾಣ ಹಂತದಲ್ಲಿದೆ. ನಾಗದೇವನಹಳ್ಳಿ ಮತ್ತು ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ 2 ನಿವೇಶನ. ಬನ್ನೇರುಘಟ್ಟ ರಸ್ತೆಯಲ್ಲಿ 3 ಪ್ರತ್ಯೇಕ ಅಪಾರ್ಟ್‍ಮೆಂಟ್‍ನಲ್ಲಿ 3 ಫ್ಲಾಟ್, ವೆಂಕಟೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಈ ಟ್ರಸ್ಟ್ ಅಡಿಯಲ್ಲಿ ಚಿತ್ತೂರಿನಲ್ಲಿ ಜ್ಞಾನಜ್ಯೋತಿ ಇಂಟರ್ ನ್ಯಾಷನಲ್ ಶಾಲೆ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
►ಲೋಕೋಪಯೋಗಿ ಇಲಾಖೆ ನಿವೃತ್ತ ಅಧೀಕ್ಷ ಅಭಿಯಂತರ ಜಿ.ಮಂಜುನಾಥ್ ಅವರ ಇಲ್ಲಿನ ಬಸವೇಶ್ವರನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದಾಗ ಮೂರು ಅಂತಸ್ತಿನ ಮನೆ, ಜಯನಗರದಲ್ಲಿ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್, ಕೆ.ಆರ್ ಪುರಂನಲ್ಲಿ ಪುತ್ರಿ ವμರ್Á ಹೆಸರಲ್ಲಿ ಅಪಾಟ್ಮೆರ್ಂಟ್, 4 ಎಕರೆ ಜಮೀನು ಸೇರಿದಂತೆ ಅಪಾರ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.
► ಕಾರವಾರ ಜಿಲ್ಲಾ ನೋಂದಣಾಧಿಕಾರಿ ಬಿ.ಎಸ್.ಶ್ರೀಧರ್ ಅವರ ಕಚೇರಿ ಮೇಲೆ ದಾಳಿ ನಡೆಸಿದಾಗ ವಿವಿಧ ಬಡಾವಣೆಗಳಲ್ಲಿ 2 ವಾಸದ ಮನೆ, ಲಕ್ಕಸಂದ್ರದಲ್ಲಿ 1 ಖಾಲಿ ನಿವೇಶನ, 650 ಬೆಳ್ಳಿ ಸಾಮಾನುಗಳು, ಕನಕಪುರ ಮರಳವಾಡಿಯಲ್ಲಿ 1 ಫಾರ್ಮ್ ಹೌಸ್, ನೆಲಮಂಗಲ ತಾಲೂಕು ಮೈಲನಹಳ್ಳಿಯಲ್ಲಿ 2 ಎಕರೆ ಕೃಷಿ ಜಮೀನು, ವಿವಿಧ ಕಂಪೆನಿಯ 2 ಬೈಕ್, ಎರಡು ಕಾರು, 30 ಸಾವಿರ ರೂ. ನಗದು, ವಿವಿಧ ಬ್ಯಾಂಕ್‍ಗಳಲ್ಲಿ 24 ಲಕ್ಷ ರೂ.ಗಳ ಠೇವಣಿ, 6 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
►ನೀರಾವರಿ ಇಲಾಖೆಯ ಚಿಕ್ಕಬಳ್ಳಾಪುರ ಕಾರ್ಯಪಾಲಕ ಅಭಿಯಂತರ ಎ.ಮೋಹನ್ ಕುಮಾರ್ ಅವರ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದಾಗ ನಾಗರಬಾವಿಯಲ್ಲಿನ ಒಂದು ವಾಸದ ಮನೆ, ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 7 ಖಾಲಿ ನಿವೇಶನಗಳು, ಬೆಂಗಳೂರು ನಗರದ ನಾಗರಬಾವಿ 2ನೇ ಹಂತದಲ್ಲಿ 2 ವಾಣಿಜ್ಯ ಸಂಕೀರ್ಣಗಳು.
►ಕೆಜಿ 279 ಗ್ರಾಂ ಚಿನ್ನಾಭರಣಗಳು, 6 ಕೆಜಿ 600 ಗ್ರಾಂ ಬೆಳ್ಳಿ ಸಾಮಾನುಗಳು, ಕೆಂಗೇರಿ ಹೋಬಳಿ ಗಾಣಕಲ್ಲು ಗ್ರಾಮದಲ್ಲಿ 1 ಎಕರೆ 19 ಗುಂಟೆ ಕೃಷಿ ಜಮೀನು, ವಿವಿಧ ಕಂಪೆನಿಯ 2 ದ್ವಿಚಕ್ರ ವಾಹನಗಳು, ವಿವಿಧ ಕಂಪೆನಿಯ 2 ಕಾರುಗಳು, ನಗದು ಹಣ 13 ಲಕ್ಷ 50 ಸಾವಿರ ರೂಗಳು, ಸುಮಾರು 15 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
►ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಿಲ್ಲಾ ಯೋಜನಾಧಿಕಾರಿ ತಿಪ್ಪಣ್ಣ ಪಿ.ಸಿ.ರಸಗಿ ನಿವಾಸದ ಮೇಲೆ ದಾಳಿ ನಡೆಸಿದಾಗ, ಕಲಬುರ್ಗಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 3 ವಾಸದ ಮನೆಗಳು, 255 ಗ್ರಾಂ ಚಿನ್ನಾಭರಣಗಳು, 1 ಕೆಜಿ 417 ಗ್ರಾಂ ಬೆಳ್ಳಿ ಸಾಮಾನುಗಳು, ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 4 ಎಕರೆ 19 ಗುಂಟೆ ಕೃಷಿ ಜಮೀನು, ವಿವಿಧ ಕಂಪೆನಿಯ 2 ಬೈಕ್, ಕಾರು, 65 ಸಾವಿರ ರೂ. ನಗದು, 7 ವಿಮಾ ಪಾಲಿಸಿಗಳು, ವಿವಿಧ ಬ್ಯಾಂಕ್‍ಗಳಲ್ಲಿ ಒಟ್ಟು 9 ಲಕ್ಷ ರೂಗಳ ಠೇವಣಿ, 6 ಸಾವಿರ ಬೆಲೆ ಬಾಳುವ 2 ಷೇರುಗಳು, 5 ಲಕ್ಷ ರೂ. ಕೈಸಾಲ ನೀಡಿರುವುದು, ಸುಮಾರು 16 ಲಕ್ಷ 70 ಸಾವಿರ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
►ಪಶು ವಿದ್ಯಾಲಯ ಬೀದರ್ ಜಿಲ್ಲೆಯ ಹಿರಿಯ ಸಹಾಯಕ ಮೃತ್ಯುಂಜಯ ಸಿ. ತಿರಾಣಿ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಬೀದರ್ ನಗರದ ಗುಮ್ಮೆ ಕಾಲೋನಿಯಲ್ಲಿ 1 ವಾಸದ ಮನೆ, ಮಹಾಗಾಂವ ಗ್ರಾಮದಲ್ಲಿ 1 ವಾಸದ ಮನೆ, ವಿವಿಧ ಕಡೆಗಳಲ್ಲಿ 6 ಖಾಲಿ ನಿವೇಶನಗಳು, 717 ಗ್ರಾಂ ಚಿನ್ನಾಭರಣಗಳು, 1 ಕೆಜಿ 531 ಗ್ರಾಂ ಬೆಳ್ಳಿ ಸಾಮಾನುಗಳು, ವಿವಿಧ ಕಡೆಗಳಲ್ಲಿ 10.35 ಎಕರೆ ಕೃಷಿ ಜಮೀನು, ಬೈಕ್, 1.71 ಲಕ್ಷ ನಗದು, 76.50 ಲಕ್ಷ ರೂ. ಠೇವಣಿ, ಸುಮಾರು 9 ಲಕ್ಷ 56 ಸಾವಿರ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
►ಸದ್ಯ ಅಮಾನತ್ತಿನಲ್ಲಿರುವ ಕೊಪ್ಪಳ ಜಿಲ್ಲಾ ಇನ್ಸ್‍ಪೆಕ್ಟರ್ ಉದಯ ರವಿ ಅವರ ನಿವಾಸ ಮೇಲೆ ದಾಳಿ ನಡೆಸಿದಾಗ ಮುದಗಲ್‍ನಲ್ಲಿ 2 ನಿವೇಶನಗಳು, ಕೊಪ್ಪಳ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 79 ಎಕರೆ 23 ಗುಂಟೆ ಕೃಷಿ ಜಮೀನು, 1 ಕೆಜಿ 36 ಗ್ರಾಂ ಚಿನ್ನಾಭರಣ, 1 ಕೆಜಿ 90 ಗ್ರಾಂ ಬೆಳ್ಳಿ ಸಾಮಾನುಗಳು, 1 ಟ್ರಾಕ್ಟರ್, ನಗದು ಹಣ 13 ಲಕ್ಷ 96 ಸಾವಿರ ರೂಗಳು ಪತ್ತೆಯಾಗಿದೆ.
►ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಹೂವಿನಹಡಗಲಿ ಸಹಾಯಕ ಅಭಿಯಂತರ ಪರಮೇಶ್ವರಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಮೇದೆಹಳ್ಳಿಯಲ್ಲಿ ಮನೆ, ಕೂಡ್ಲಿಗಿ ನಗರದಲ್ಲಿ ಮನೆ, ವಿವಿಧ ಕಡೆ 7 ಖಾಲಿ ನಿವೇಶನಗಳು, 23 ಗ್ರಾಂ ವಜ್ರದ(ಡೈಮಂಡ್) ನೆಕ್‍ಲೆಸ್, 892 ಗ್ರಾಂ ಚಿನ್ನಾಭರಣಗಳು, 2 ಕೆಜಿ 686 ಗ್ರಾಂ ಬೆಳ್ಳಿ ಸಾಮಾನು.
►ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ 4 ಎಕರೆ 72 ಸೇಂಟ್ ಕೃಷಿ ಜಮೀನು, ಬೈಕ್, ಕಾರು ಸೇರಿದಂತೆ ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.
►ಹಾವೇರಿಯ ಸಹಾಯಕ ಅಭಿಯಂತರ ಚಂದ್ರಪ್ಪ ಓಲೇಕಾರ ಮನೆ ಹಾಗೂ ಕಚೇರಿ ಮೇಲೆ ಮೂರು ತಂಡಗಳೊಂದಿಗೆ ಎಸಿಬಿ ದಾಳಿ ನಡೆಸಿದಾಗ ರಾಣೆಬೆನ್ನೂರು ನಗರದ ಎರಡು ಮನೆಗಳು, ಐದು ನಿವೇಶನ, ಬ್ಯಾಡಗಿ ತಾಲೂಕಿನ ಆಣೂರು ಮತ್ತು ರಾಣೆಬೆನ್ನೂರು ಸೇರಿದಂತೆ ಒಟ್ಟು 26 ಎಕರೆ ಜಮೀನು, 403 ಗ್ರಾಂ ಚಿನ್ನ, 1 ಕೆ.ಜಿ 600 ಗ್ರಾಂ ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. ಜತೆಗೆ, 13.30 ಲಕ್ಷ ನಗದು, 3 ಬೈಕ್‍ಗಳು, ಕಾರು, ತಂದೆಯ ಹೆಸರಿನಲ್ಲಿರುವ ಒಂದು ಟ್ರ್ಯಾಕ್ಟರ್, ಎರಡು ಹಸುಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.
►ಬೆಂಗಳೂರಿನ ಕಂದಾಯ ಭವನ ಆಯುಕ್ತರ ಕಚೇರಿಯ ಸಹಾಯಕ ಮಹಾನಿರೀಕ್ಷಕ ನೋಂದಣಿ ವಿ.ಮಧುಸೂದನ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಒಟ್ಟು ಬೆಂಗಳೂರಿನಲ್ಲಿ ಮೂರು ವಾಸದ ಮನೆ, 1 ಖಾಲಿ ನಿವೇಶನ, 2 ಕೆಜಿ 290 ಗ್ರಾಂ ಚಿನ್ನಾಭರಣಗಳು, 4 ಕೆಜಿ 990 ಗ್ರಾಂ ಬೆಳ್ಳಿ ಸಾಮಾನುಗಳು, ಮಂಡ್ಯ ಜಿಅÉ್ಲಯ ವಿವಿಧ ಕಡೆಗಳಲ್ಲಿ ಒಟ್ಟು 13 ಎಕರೆ 05 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 1 ಕಾರು, ನಗದು ಹಣ 39 ಲಕ್ಷ ರೂಗಳು, ವಿವಿಧ ಬ್ಯಾಂಕ್‍ಗಳಲ್ಲಿ 5 ಲಕ್ಷ ಠೇವಣಿ ಸೇರಿದಂತೆ ಅಪಾರ ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ.
►ಹಾಸನ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಸಹಾಯ ಕಾರ್ಯಪಾಲಕ ಅಭಿಯಂತರ ಎಚ್.ಇ.ರಾಮಕೃಷ್ಣ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದಾಗ ಹಾಸನದ ವಿದ್ಯಾನಗರದಲ್ಲಿನ 1 ವಾಸದ ಮನೆ, ಒಟ್ಟು 3 ನಿವೇಶನಗಳು, 121 ಗ್ರಾಂ ಚಿನ್ನಾಭರಣಗಳು, 1 ಕೆಜಿ 242 ಗ್ರಾಂ ಬೆಳ್ಳಿ ಸಾಮಾನುಗಳು, ಹಾಸನ ಜಿಅÉ್ಲಯ ವಿವಿಧ ಕಡೆಗಳಲ್ಲಿ ಒಟ್ಟು 26 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 1 ಕಾರು, ನಗದು ಹಣ 23 ಸಾವಿರ ರೂ. ವಿವಿಧ ಬ್ಯಾಂಕ್‍ಗಳಲ್ಲಿ 37 ಲಕ್ಷ ಠೇವಣಿ ಒಳಗೊಂಡತೆ ಅಪಾರ ಮೌಲ್ಯದ ಸಂಪತ್ತು ಪತ್ತೆಯಾಗಿದೆ.
►ಅದೇ ರೀತಿ, ಕೊಡಗು ವಿರಾಜಪೇಟೆ ಜಿಲ್ಲಾ ಪಂಚಾಯತಿಯ ಸಹಾಯಕ ಅಭಿಯಂತರ ಓಬಯ್ಯ ನಿವಾಸದ ಮೇಲೆ ದಾಳಿ ನಡೆಸಿದಾಗ ವಿವಿಧ ಕಡೆಗಳಲ್ಲಿ 3 ವಾಸದ ಮನೆಗಳು, 342 ಗ್ರಾಂ ಚಿನ್ನಾಭರಣಗಳು, 2 ಕೆಜಿ 830 ಗ್ರಾಂ ಬೆಳ್ಳಿ ಸಾಮಾನುಗಳು, ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 9 ಎಕರೆ 14 ಗುಂಟೆ ಕೃಷಿ ಜಮೀನು, 1 ಕಾರು, ನಗದು ಹಣ 3 ಲಕ್ಷ 33 ಸಾವಿರ ರೂಗಳು, ಸುಮಾರು 30 ಸಾವಿರ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
►ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಭೀಮರಾವ್ ಯಶವಂತ ಪವಾರ ನಿವಾಸದ ಮನೆ ದಾಳಿ ನಡೆಸಿದಾಗ ಟಿಳಕವಾಡಿ ಯಲ್ಲಿ 1 ವಾಸದ ಮನೆ, ನಿಪ್ಪಾಣಿಯ ಶಿವಾಜಿನಗರದಲ್ಲಿ 1 ವಾಸದ ಮನೆ, ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ 2 ಖಾಲಿ ನಿವೇಶನಗಳು, ನಿಪ್ಪಾಣಿಯಲ್ಲಿ ನಿರ್ಮಾಣ ಹಂತದಲ್ಲಿರುವ 1 ಪೆಟ್ರೋಲ್ ಬಂಕ್, ಬೋರಗಾಂವ ಇಲ್ಲಿನ 2 ವಾಣಿಜ್ಯ ಸಂಕೀರ್ಣಗಳು, 900 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಸಾಮಾನುಗಳು, ಒಟ್ಟು 22 ಎಕರೆ 12 ಗುಂಟೆ ಕೃಷಿ ಜಮೀನು, 3 ದ್ವಿಚಕ್ರ ವಾಹನಗಳು, 2 ಕಾರುಗಳು, ನಗದು ಹಣ 8 ಲಕ್ಷ 50 ಸಾವಿರ ರೂಗಳು, 2 ವಿಮಾ ಪಾಲಿಸಿಗಳು, ವಿವಿಧ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆಗಳು, ಸುಮಾರು 10 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
►ಇನ್ನೂ, ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ಕಾರ್ಯದರ್ಶಿ ಪ್ರದೀಪ ಶಿವಪ್ಪ ಆಲೂರ ಬಳಿ 1 ವಾಸದ ಮನೆ, ಬೆಂತೂರ ಗ್ರಾಮದಲ್ಲಿ 1 ವಾಸದ ಮನೆ, ಧಾರವಾಡ ನಗರದ ಶಾಂತಿ ಕಾಲೋನಿಯಲ್ಲಿ 1 ವಾಸದ ಮನೆ, ಒಟ್ಟು 7 ಖಾಲಿ ನಿವೇಶನಗಳು, ಒಟ್ಟು 39 ಎಕರೆ 39 ಗುಂಟೆ ಕೃಷಿಜಮೀನು, 3 ದ್ವಿಚಕ್ರ ವಾಹನಗಳು, 2 ಕಾರುಗಳು, 2 ಟ್ರಾಕ್ಟರ್ ಗಳು, 5 ಲಕ್ಷ ಬೆಲೆಯ ವಿಮಾ ಪಾಲಿಸಿ, ನಗದು ಹಣ 2 ಲಕ್ಷ 58 ಸಾವಿರ ರೂ., ವಿವಿಧ ಬ್ಯಾಂಕ್‍ಗಳಲ್ಲಿ ಒಟ್ಟು 16 ಖಾತೆಗಳು ಅವುಗಳಲ್ಲಿ ಒಟ್ಟು 5 ಲಕ್ಷ 19ಸಾವಿರ ಠೇವಣಿ ಸೇರಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ.
►ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ನಾಗಪ್ಪ ಗೋಗಿ ಬಳಿ ನಗರದಲ್ಲಿ 1ವಾಸದ ಮನೆ, ಕೊಪ್ಪಳ ಪಟ್ಟಣ ಮತ್ತು ಧಾರವಾಡ ಜಿಲ್ಲೆಗಳಲ್ಲಿ 2 ಖಾಲಿ ನಿವೇಶನಗಳು, 2 ವಾಣಿಜ್ಯ ಸಂಕಿರ್ಣಗಳು, 350 ಗ್ರಾಂ ಚಿನ್ನಾಭರಣಗಳು, 3 ಕೆಜಿ ಬೆಳ್ಳಿ ಸಾಮಾನುಗಳು ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ದಾಖಲೆ ಸಿಕ್ಕಿವೆ.
►ಬಾಗಲಕೋಟೆಯ ಆರ್‍ಟಿಒ ಯಲ್ಲಪ್ಪ ಪಡಸಾಲಿ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ ಕೃಷ್ಣಾಪುರಗ್ರಾಮದಲ್ಲಿ 1 ವಾಸದ ಮನೆ, ಲಕಮನಹಳ್ಳಿ ಗ್ರಾಮದಲ್ಲಿ 1 ವಾಸದ ಮನೆ, ಕೊಪ್ಪಳನಗರದ ಭಾಗ್ಯ ನಗರದಲ್ಲಿ 1 ವಾಸದ ಮನೆ, ಹುಬ್ಬಳ್ಳಿ ತಾಲ್ಲೂಕು ಅಮರಗೋಳ ಗ್ರಾಮದಲ್ಲಿ 1 ಖಾಲಿನಿವೇಶನ, 3 ವಾಣಿಜ್ಯ ಸಂಕೀರ್ಣ. ಬೆಂಗಳೂರಿನ ದಾಸರಹಳ್ಳಿಯಲ್ಲಿ 1 ಫ್ಲಾಟ್, 824 ಗ್ರಾಂ ಚಿನ್ನಾಭರಣಗಳು, 5 ಕೆಜಿ 700 ಗ್ರಾಂ ಬೆಳ್ಳಿಸಾಮಾನುಗಳು, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 11 ಎಕರೆ 35 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 3 ಕಾರುಗಳು, ನಗದು ಹಣ 62ಲಕ್ಷ 50 ಸಾವಿರ ರೂಗಳು, ವಿವಿಧ ಬ್ಯಾಂಕ್‍ಗಳಲ್ಲಿ ಒಟ್ಟು 12 ಬ್ಯಾಂಕ್ ಖಾತೆಗಳು, ಸುಮಾರು 10ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
► ಕಾರವಾರದ ಪ್ರಧಾನ ಮಂತಿ ಗ್ರಾಮ ಸಡಕ್ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ರಾಜೀವ್ ನಾಯಕ್ ಬಳಿ ಅಪಾರ್ಟ್‍ಮೆಂಟ್‍ನಲ್ಲಿ 1 ಫ್ಲಾಟ್(ವಾಸದ ಮನೆ), ಬೆಂಗಳೂರು ಮತ್ತು ಕಾರವಾರಗಳಲ್ಲಿ ಒಟ್ಟು 2 ಖಾಲಿ ನಿವೇಶನಗಳು, ಬೆಂಗಳೂರಿನಲ್ಲಿ 1 ಫ್ಲಾಟ್, 200ಗ್ರಾಂ ಚಿನ್ನಾಭರಣಗಳು, 1 ಕೆಜಿ ಬೆಳ್ಳಿ ಸಾಮಾನುಗಳು, ಶಿರಸಿಯಲ್ಲಿ 4 ಗುಂಟೆ ಕೃಷಿ ಜಮೀನು. 2 ದ್ವಿಚಕ್ರ ವಾಹನಗಳು, 2 ಕಾರುಗಳು, 4 ಲಕ್ಷ ರೂ., ನಗದು ಹಣ, 3 ಲಕ್ಷ 50 ಸಾವಿರ ನಗದು ಸೇರಿದಂತೆ ಅಪಾರ ಮೌಲ್ಯ ಆಸ್ತಿ ಬೆಳಕಿಗೆ ಬಂದಿದೆ.
►ಉಡುಪಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಸಹಾಯಕ ಇಂಜಿನಿಯರ್ ಹರೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಉಡುಪಿಯ ಬಡಗಬೆಟ್ಟು ಗ್ರಾಮದಲ್ಲಿ 1 ವಾಸದ ಮನೆ, ಪೆರ್ಡೂರು ಮತ್ತು ಹಾವಂಜೆ ಗ್ರಾಮದಲ್ಲಿ 2 ಖಾಲಿ ನಿವೇಶನಗಳು, ವಿವಿಧ ಕಡೆಗಳಲ್ಲಿ ಒಟ್ಟು 3 ಎಕರೆ ಕೃಷಿ ಜಮೀನು, 970ಗ್ರಾಂ ಚಿನ್ನಾಭರಣಗಳು, 230 ಗ್ರಾಂ ಬೆಳ್ಳಿ ಸಾಮಾನುಗಳು, 2 ದ್ವಿ ಚಕ್ರವಾಹನಗಳು, 2 ಕಾರುಗಳು, 4 ಲಕ್ಷ 3 ಸಾವಿರ ರೂಗಳ ನಗದು ಹಣ, 7 ಲಕ್ಷ ರೂಗಳ ಬ್ಯಾಂಕ್ ಠೇವಣಿ, ಸುಮಾರು 8 ಲಕ್ಷ ರೂ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.
►ಚಿಕ್ಕಮಗಳೂರು ಅಜ್ಜಂಪುರಪಟ್ಟಣ ಪಂಚಾಯಿತಿ ಎಸ್‍ಡಿಎ ಬಿ.ಜಿ. ತಿಮ್ಮಯ್ಯ, ಬಳಿ ಕಡೂರು ತಾಲ್ಲೂಕಿನಲ್ಲಿ 2 ವಾಸದ ಮನೆಗಳು, ಕಡೂರು ಮತ್ತು ಇತರೆ ಕಡೆಗಳಲ್ಲಿ 3 ಖಾಲಿ ನಿವೇಶನಗಳು, ಕಡೂರು ತಾಲೂಕಿನಲ್ಲಿ ಮೂರು ಹಂತಸ್ತಿನ 1 ವಾಣಿಜ್ಯ ಸಂಕೀರ್ಣ, ಕಡೂರು ತಾಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 21 ಎಕರೆ ಕೃಷಿ ಜಮೀನು, 150 ಗ್ರಾಂ ಚಿನ್ನಾಭರಣ ಸೇರಿದಂತೆ ಇನ್ನಿತರೆ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಮಾಹಿತಿ ಹಂಚಿಕೊಂಡಿದೆ.
The Anti-Corruption Bureau sleuths are conducting a search and seizure operations at 80 locations belonging to 21 state government officials, who have allegedly amassed wealth disproportionate to their known sources of income @XpressBengaluru @praveen3537 @seemantsingh96 pic.twitter.com/4Hx8NUs1LE
— MG Chetan (@mg_chetan) June 17, 2022