ಜು.15ರೊಳಗೆ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ: ಸಚಿವ ಬಿ.ಸಿ. ನಾಗೇಶ್

Update: 2022-06-18 15:34 GMT

ಬೆಂಗಳೂರು, ಜೂ.18: ರಷ್ಯಾ-ಉಕ್ರೇನ್ ಯುದ್ದದ ಬಿಕ್ಕಟ್ಟಿನಿಂದ ಪಠ್ಯಪುಸ್ತಕಗಳು ಮುದ್ರಣವಾಗುವುದು ವಿಳಂಬವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಆಗಸ್ಟ್, ನವೆಂಬರ್ ತಿಂಗಳವರೆಗೂ ಪಠ್ಯಪುಸ್ತಕವು ಮಕ್ಕಳಿಗೆ ತಲುಪಿದೆ. ಪರಿಷ್ಕರಣೆ ಇಲ್ಲದ ಸಮಯದಲ್ಲೂ ಹೀಗೆ ವಿಳಂಬವಾಗಿದೆ. ಈ ಬಾರಿ ಜೂನ್ ಮೊದಲ ವಾರದಲ್ಲಿ ಪಠ್ಯವನ್ನು ತಲುಪಿಸುವ ಗುರಿ ಇತ್ತು. ಆದರೆ ಯುದ್ಧದ ಕಾರಣಕ್ಕಾಗಿ ಉಂಟಾದ ಕಾಗದ ಬಿಕ್ಕಟ್ಟಿನಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. 

ಶೇ.92ರಷ್ಟು ಪಠ್ಯಪುಸ್ತಕಗಳು ಮುದ್ರಣವಾಗಿದ್ದು, ಶೇ.79 ಪಠ್ಯಪುಸ್ತಗಳು ತಲುಪಿವೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಶಾಲೆಗಳಿಗೆ ಶೇ.100ರಷ್ಟು ಪಠ್ಯಪುಸ್ತಕ ತಲುಪಿದೆ. ಜು.15ರೊಳಗೆ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಲಾಗುವುದು ಎಂದರು. 

ಪಠ್ಯಪರಿಷ್ಕರಣೆಯಲ್ಲಿ ಲೋಪಗಳನ್ನು ತಿದ್ದುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಷ್ಕøತ ಪಠ್ಯದಲ್ಲಿ ಉಂಟಾದ ಲೋಪದೋಷಗಳನ್ನು ಸರಿಮಾಡಿಕೊಳ್ಳಲು ಒಂದು ತಿಂಗಳು ಕಾಲಾವಕಾಶ ಬೇಕು ಎಂದರು.

ಪಠ್ಯಪರಿಷ್ಕರಣೆಯಲ್ಲಿ ಸರಕಾರವು ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ. ಪದೇ ಪದೇ ಸರಕಾರ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರತಿಭಟನೆಗಳು ಹಿಂದಿನಿಂದ ನಡೆದುಕೊಂಡು ಬಂದಿವೆ. ಈಗಲೂ ನಡೆಯುತ್ತದೆ. ದೇಶದಲ್ಲಿ ಪ್ರತಿಭಟನೆ ಮಾಡಲು ಸ್ವಾತಂತ್ರ್ಯವಿದೆ.  

-ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News