ಕಿಮ್ಸ್ ನಲ್ಲಿ ಮಗು ಕಳ್ಳತನ ನಾಟಕವಾಡಿದ ಪ್ರಕರಣ: ಹೆತ್ತ ತಾಯಿಗೆ 14 ದಿನ ನ್ಯಾಯಾಂಗ ಬಂಧನ

Update: 2022-06-19 15:47 GMT

ಹುಬ್ಬಳ್ಳಿ, ಜೂ.19: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣದಲ್ಲಿ ತಾಯಿಯೇ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹೆತ್ತ ಮಗುವನ್ನು ಎಸೆದ ತಾಯಿಗೆ ಹುಬ್ಬಳ್ಳಿ 1ನೆ ಅಧಿಕ ದಿವಾಣಿ ಹಾಗೂ ಜೆಎಮ್‍ಎಫ್‍ಸಿ ಕೋರ್ಟ್, 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. 

ಜೂ.13ರಂದು ಮಧ್ಯಾಹ್ನ ಕಿಮ್ಸ್ ಆವರಣದಲ್ಲಿ ಕೈಯಲ್ಲಿದ್ದ ಮಗು ಕಳ್ಳತನವಾಗಿದೆ ಎಂದು ತಾಯಿ ಸಲ್ಮಾ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ವಿದ್ಯಾನಗರ ಪೊಲೀಸರು ಕಿಮ್ಸ್‍ನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು. 

ಬಳಿಕ, ತಾಯಿಯೇ ಮಗು ಕಳ್ಳತನ ನಾಟಕವಾಡಿದ್ದಾಳೆ ಎಂಬುದನ್ನು ಪತ್ತೆ ಹಚ್ಚಿದ್ದರು. ನಂತರ ಸಲ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಗುವಿನ ಮೆದುಳು ಬೆಳವಣಿಗೆಯಾಗದ ಕಾರಣ ಬಾತ್ ರೂಂ ಕಿಟಕಿಯ ಮೂಲಕ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಜೆಎಮ್‍ಎಫ್‍ಸಿ ಕೋರ್ಟ್ ವಿಚಾರಣೆ ನಂತರ ಆರೋಪಿ ಸಲ್ಮಾಳಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News