ಜನಪರ ಯೋಜನೆಗಳನ್ನು ನೀಡುವುದರಲ್ಲಿ ಯಶಸ್ವಿಯಾದ 'ಡಬಲ್ ಇಂಜಿನ್ ಸರ್ಕಾರ': ಮೈಸೂರಿನಲ್ಲಿ ಪ್ರಧಾನಿ ಮೋದಿ

Update: 2022-06-20 15:44 GMT

ಮೈಸೂರು: ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರ ಜನಪರ ಯೋಜನೆಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳುವ ಮೂಲಕ ಟೀಕಾಕಾರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು.

ನಗರದ ಮಹರಾಜವಕಾಲೇಜು ಮೈದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳೊಂದಿಗೆ ಸೋಮವಾರ ಸಂವಾದ ನಡೆಸಿ ನಂತರ ಅಖಿಲ ಭಾತರ ವಾಕ್ ಮತ್ತು ಶ್ರವಣ ಸಂಸ್ಥೆಯ ಉತ್ಕೃಷ್ಟ ಕಟ್ಟಡ ಲೋಕಾರ್ಪಣೆಗೊಳಿಸಿ ನಾಗನಹಳ್ಳಿ ಮೈಸೂರು ನೂತನ ರೈಲ್ವೆ ಕೋಚಿಂಗ್ ಕಾಂಪ್ಲೆಕ್ಸ್ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರ್ಕಾರದ ಅಭಿವೃದ್ಧಿಯೋಜನೆಗಳು ಸೀಮಿತವಾಗಿದ್ದವು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಲವಾರು ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದೇವೆ. ಇದರಲ್ಲಿ ಒನ್ ನೇಷನ್ ಒನ್ ರೇಷನ್ ಕಾಡ್೯, ಆಯುಷ್ಮಾನ್ ಕಾಡ್೯ ಪ್ರಮುಖವಾದುದು. ರಾಜ್ಯದಲ್ಲಿ 2004 ರಿಂದ 2014 ರವರಗೆ ಹಿಂದಿನ ಸರ್ಕಾರಗಳು ಹತ್ತು ವರ್ಷದ ಅಧಿಯಲ್ಲಿ ಕೇವಲ 16 ಕೀ.ಮಿ ರೈಲ್ವೆ ವಿದ್ಯುದ್ದೀಕರಣ ಮಾಡಿದ್ದವು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ 8 ವರ್ಷದಲ್ಲಿ 1600 ಕೀ.ಮಿ ರೈಲ್ವೆ ವಿದ್ಯುದ್ದೀಕರಣ ಮಾಡಿದ್ದೇವೆ ಎಂದು ಹೇಳಿದರು.

21ನೇ ಶತಮಾನದಲ್ಲಿ ಅಭಿವೃದ್ದಿಯ ಕಡೆ ಸಾಗುತ್ತಿರುವ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಆರ್ಥಿಕತೆ ಮತ್ತು ಸಂಸ್ಕೃತಿಯ ಸಮಾನತೆಯಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ಮಾದರಿಯಾಗಿದೆ. ಮೈಸೂರು ಮತ್ತು ಕರ್ನಾಟಕ ರಾಜ್ಯಕ್ಕೆ ನಾಲ್ಬಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದ್ದು, ವಿಶ್ವೆಶ್ವರಯ್ಯ ಮತ್ತು ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಿಂದ ರಾಜ್ಯದಲ್ಲಿ ಒಂದುವರೆ ಲಕ್ಷ ಬೀದಿ ಬದಿ ವ್ಯಾಪಾರಿಗಳು ಅನುಕೂಲ ಪಡೆದಿದ್ದು, 56 ಲಕ್ಷ ಸಣ್ಣ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹತ್ತು ಸಾವಿರ ಕೊಟಿ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದ್ದೇವೆ. ಮುದ್ರಾ ಯೋಜನೆಯಿದ 1.80ಲಕ್ಷ  ಕೋಟಿ ಸಾಲ ನೀಡಲಾಗಿದೆ.  29 ಲಕ್ಷ ಆಯಷ್ಮಾನ್ ಕಾಡ್೯ ಫಲಾನುಭವಿಗಳಿಗರ 4ಸಾವಿರ ಕೋಟಿ ಹಣ ನೀಡಲಾಗಿದೆ. 8 ವರ್ಷದಲ್ಲಿ ನಮ್ಮ ಸರ್ಕಾರ ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ, ಸಂಸದರುಗಳಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಹ, ಸುಮಲತಾ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News