ನವಲಗುಂದ| ದ್ವಿತೀಯ ಪಿ.ಯು ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಪ್ರಿಯಾಂಕ ಪಿ.ಯು. ಕಾಲೇಜ್ ತಾಲೂಕಿಗೆ ಪ್ರಥಮ

Update: 2022-06-21 07:17 GMT

ನವಲಗುಂದ: ಪಟ್ಟಣದ ಪ್ರಿಯಾಂಕ ಸ್ವತಂತ್ರ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು.ಸಿ ಫಲಿತಾಂಶವು ಶೇ.71% ರಷ್ಟು ಆಗಿದ್ದು. ವಿಶಿಷ್ಟ ಶ್ರೇಣಿ-5, ಪ್ರಥಮ-16, ದ್ವಿತೀಯ-14 ದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜ್ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದೆ.

ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಬಸಪ್ಪ ಸೊಟಕನಾಳ ಶೇ.93%, ಹೇಮಾ ಮಲ್ಲೇಶಪ್ಪ ರೊಟ್ಟಿ ಶೇ.92.33%, ಮಧು ಬಸವರಾಜ ಈರೇಶನವರ ಶೇ.89%, ದೀಪಾ ಈರಪ್ಪ ದಾಡಿಭಾವಿ ಶೇ.87%, ಬಸವ್ವ ಯಲ್ಲಪ್ಪ ಕನಕಣ್ಣವರ ಶೇ.86.33%, ಪಾರ್ವತಿ ಪ್ರಭುಗೌಡ ಪಾಟೀಲ ಶೇ.84%, ಬಸವಣ್ಣೆವ್ವ ಮಹಾದೇವಪ್ಪ ಪಲ್ಲೇದ ಶೇ.81%, ಕವಿತಾ ಸಂಗಪ್ಪ ಅಂಗಡಿ ಶೇ.80% ಅಂಕ ಪಡೆದಿದ್ದಾರೆ. 

ಕಲಾ ವಿಭಾಗದಲ್ಲಿ ಸುನೀತಾ ಬಸಪ್ಪ ಜೋಗನಾಯ್ಕರ ಶೇ.81.16%, ಕವಿತಾ ಸುರೇಶ ಕೋತಂಬ್ರಿ ಶೇ.80.83%, ಪಲ್ಲವಿ ಓಲೇಕಾರ ಶೇ.77% ಅಂಕಗಳನ್ನು ಗಳಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಕೆ.ಎನ್.ಗಡ್ಡಿ ಪ್ರಾಂಶುಪಾಲ ಎಂ.ಎ. ಕೊಪ್ಪಳ ಮತ್ತು ಉಪನ್ಯಾಸಕರು ಹಾಗೂ ಎಲ್ಲ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News