ಲಲಿತ ಪ್ರಬಂಧ ಪ್ರಕಾರದ ಪ್ರಶಸ್ತಿ ರದ್ದುಗೊಳಿಸಿದ ಹೈಕೋರ್ಟ್

Update: 2022-06-21 12:10 GMT

ಬೆಂಗಳೂರು, ಜೂ.21: ಕನ್ನಡ ಸಾಹಿತ್ಯ ಅಕಾಡಮಿಯ 2013ನೆ ಸಾಲಿನ ಲಲಿತ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಸಾಹಿತಿ ಎಂ.ಡಿ.ಗೊಗೇರಿ ಅವರ ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು ಪುಸ್ತಕವನ್ನು ಆಯ್ಕೆ ಮಾಡಲಾಗಿದ್ದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. 

ಕೊಡಗಿನ ಸೋಮವಾರಪೇಟೆ ತಾಲೂಕಿನ ಸಾಹಿತಿ ಭಾರದ್ವಾಜ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಕನ್ನಡ ಸಾಹಿತ್ಯ ಅಕಾಡಮಿಯ ಬೈಲಾದ ನಿಯಮ ಅನ್ವಯ ಉಪ ಸಮಿತಿಯನ್ನು ಮರು ರಚಿಸಬೇಕು. ಉಪ ಸಮಿತಿಯು ಗೊಗೇರಿ ಮತ್ತು ಭಾರದ್ವಾಜ ಅವರ ಕೃತಿಗಳನ್ನು ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಈ ಪ್ರಕ್ರಿಯೆಯನ್ನು 60 ದಿನದೊಳಗೆ ಪೂರ್ಣಗೊಳಿಸಬೇಕು ಎಂದು ಅಕಾಡಮಿಗೆ ಹೈಕೋರ್ಟ್ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News