ಯುವತಿಯ ಅತ್ಯಾಚಾರ ಪ್ರಕರಣ: ಅಧಿಕಾರಿ ರವಿಶಂಕರ್, ಸಚಿವ ಮುನಿರತ್ನ ವಿರುದ್ಧದ ಅಪರಾಧ ಪರಿಗಣಿಸಿದ ಕೋರ್ಟ್
Update: 2022-06-21 23:28 IST
ಬೆಂಗಳೂರು, ಜೂ.21: ಮದುವೆ ಆಗುವುದಾಗಿ ನಂಬಿಸಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಐಎಫ್‍ಎಸ್ ಅಧಿಕಾರಿ ಆರ್.ರವಿಂಶಕರ್, ಸಚಿವ ಮುನಿರತ್ನ ಸೇರಿ 11 ಮಂದಿಯ ವಿರುದ್ಧದ ಅಪರಾಧಗಳನ್ನು ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜ್ಞಾನಕ್ಕೆ ತೆಗೆದುಕೊಂಡಿದ್ದು, ದೂರುದಾರೆಯ ಹೇಳಿಕೆ ದಾಖಲಿಸಿಕೊಳ್ಳಲು ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಿಕೆ ಮಾಡಿದೆ.
ಸಂತ್ರಸ್ತೆ ಯುವತಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ನಲ್ಲಿ ನಡೆಯಿತು.
ಹನ್ನೊಂದು ಮಂದಿ ಆರೋಪಿಗಳಿಗೆ ಐಪಿಸಿ ಸೆಕ್ಷನ್‍ಗಳ ಅಡಿ ಅಪರಾಧಗಳ ಸಂಜ್ಞಾನಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ದೂರುದಾರೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಪೀಠ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿಕೆ ಮಾಡಿದೆ.