×
Ad

ಮಹಿಳೆಯ ಸಾಮೂಹಿಕ ಅತ್ಯಾಚಾರ: 8 ಕಾನ್ಸ್ ಟೇಬಲ್ ಗಳ ವಜಾ ಎತ್ತಿಹಿಡಿದ ಹೈಕೋರ್ಟ್

Update: 2022-06-21 23:36 IST

ಬೆಂಗಳೂರು, ಜೂ.21: ಸಹೋದ್ಯೋಗಿ ಕಾನ್ಸ್‍ಟೇಬಲ್ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ 8 ಜನ ಕಾನ್ಸ್ ಟೇಬಲ್‍ಗಳ ವಜಾ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

ಕಾನ್ಸ್ ಟೇಬಲ್ ಹುದ್ದೆಯಿಂದ ವಜಾಗೊಳಿಸಿರುವುದರ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಆದೇಶ ನೀಡಿದೆ. 

2015ರಲ್ಲಿ ಕಾನ್ಸ್ ಟೇಬಲ್ ಪತ್ನಿ ದೂರಿನ ಮೇಲೆ ವಿಚಾರಣೆ ನಡೆದಿತ್ತು. ಪರಿಚಯ ಬೆಳೆಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದರು. ಅಲ್ಲದೆ, ಮತ್ತೊಬ್ಬರ ಜತೆ ಸಂಬಂಧ ಹೊಂದಿರುವುದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, 8 ಮಂದಿ ಸೇರಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News