'ಅಗ್ನಿಪಥ್' ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ: ಕಾಂಗ್ರೆಸ್

Update: 2022-06-22 12:58 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಜೂ. 22: ‘ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ' ಎಂದು ಕಾಂಗ್ರೆಸ್, ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನಿಯಮದ ಅನುಸಾರ ‘ನಿವೃತ್ತ ಯೋಧ' ಎಂದು ಪರಿಗಣಿಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು, 4 ವರ್ಷ ಸೇವೆ ಮಾಡುವ ಅಗ್ನಿವೀರರಿಗೆ ಆ ಗೌರವವೂ ದೊರಕುವುದಿಲ್ಲ. ವೃತ್ತಿ ಕೌಶಲ್ಯ ನೀಡುತ್ತೇವೆ ಎಂದಿರುವ ಸರಕಾರ ತನ್ನ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಮುಚ್ಚಿದೆಯೇ?' ಎಂದು ಪ್ರಶ್ನಿಸಿದ್ದಾರೆ.

‘ವಿದೇಶದಲ್ಲಿ ಯೋಗ ಉತ್ಸವಕ್ಕಾಗಿ 800 ಕೋಟಿ ರೂ., ಯೋಗ ಆಚರಿಸಲು ಟೀ ಶರ್ಟ್ ಮತ್ತು ಮ್ಯಾಟ್ ಖರೀದಿಗೆ 160 ಕೋಟಿ ರೂ., ಯೋಗ ಪ್ರಚಾರಕ್ಕಾಗಿ ನೂರಾರು ಕೋಟಿ ರೂ. ಖರ್ಚು ನೆನಪಿರಲಿ, ಅಸ್ಸಾಂ ಪ್ರವಾಹಕ್ಕೆ ಕೇಂದ್ರ ಸರಕಾರ ನೀಡಿರುವ ಪರಿಹಾರ ಮೊತ್ತ ಕೇವಲ 324 ಕೋಟಿ ರೂ., ಇದು ಪ್ರಚಾರದ ಹಿಂದೆ ಬಿದ್ದಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಖರಿ' ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News