ಕೊಡಗು ಜಿಲ್ಲೆಯ ಹಲವೆಡೆ ಭೂಮಿ‌ ಕಂಪಿಸಿದ ಅನುಭವ

Update: 2022-06-23 04:31 GMT

ಕೊಡಗು, ಜೂ.23: ಕೊಡಗು ಜಿಲ್ಲೆಯ ಹಲವೆಡೆ ಇಂದು ಮುಂಜಾನೆ ಭೂಮಿ‌ ಕಂಪಿಸಿದ ಅನುಭವ ಆಗಿದ್ದು, ನಿದ್ರೆಯಲ್ಲಿದ್ದ ಜನರು ಬೆಚ್ಚಿಬಿದ್ದು ಮನೆಯಿಂದ ಹೊರಗೆ ಬಂದಿದ್ದಾರೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಲಘು ಭೂಕಂಪನವನ್ನು ದೃಢಪಡಿಸಿದೆ. ಮುಂಜಾನೆ 4:37ರ ಗಂಟೆಗೆ ರಿಕ್ಟರ್ ಮಾಪಕದಲ್ಲಿ ಭೂಕಂಪನ ದಾಖಲಾಗಿದ್ದು, ಹಾಸನ‌‌ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕೆ ಕಂಪನದ ಕೇಂದ್ರ ಬಿಂದುವಾಗಿತ್ತು ಎಂದು ಪ್ರಾಧಿಕಾರ ತಿಳಿಸಿದೆ.

ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳೆ ಗ್ರಾಮದ ಜನರ ಭೂ ಕಂಪನದ ಅನುಭವ ಆಗಿರುವುದಾಗಿ ಹೇಳಿದ್ದಾರೆ. ಅದೇರೀತಿ ಮಡಿಕೇರಿ ತಾಲೂಕಿನ ದೇವಸ್ತೂರು ಸೇರಿದಂತೆ ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿರುವುದಾಗಿ ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ಹಾಸನ ಸೇರಿದಂತೆ ಹಾಸನಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಭೂ ಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದ್ದು, ಜನರು ಆತಂಕಿತರಾಗಿದ್ದಾರೆ.

ಕಳೆದ ಮಳೆಗಾಲದ ಆರಂಭದಲ್ಲೂ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News