ಲಂಚ ಪಡೆಯುವ ವೇಳೆ ಎಚ್.ಡಿ.ಕೋಟೆ ಬಿಇಓ ಹಾಗೂ ಅಧೀಕ್ಷಕ ಎಸಿಬಿ ಬಲೆಗೆ

Update: 2022-06-23 18:02 GMT

ಮೈಸೂರು,ಜೂ.23: ಶಿಕ್ಷಕರೊಬ್ಬರ ನಿವೃತ್ತ ವೇತನಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುವ  ವೇಳೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್ ಹಾಗೂ ಕಚೇರಿ ಅಧೀಕ್ಷಕ ಶಂಕರ ಎಸಿಬಿ ಬಲೆ ಬಿದಿದ್ದಾರೆ.

ನಂಜನಗೂಡು ತಾಲ್ಲೂಕು ರಾಂಪುರ ಗ್ರಾಮದ ಶಿಕ್ಷಕರೊಬ್ಬರು ನಿವೃತ್ತಿಗೊಂಡಿದ್ದರು. ಇವರ ನಿವೃತ್ತ ವೇತನ ಜಾರಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಮಹಾಲೆಕ್ಕಾಧಿಕಾರಿಗಲ ಕಚೇರಿಗೆ ತಲುಪಿಸಲು 9 ಸಾವಿರ ರೂ. ಲಂಚಕ್ಕೆ ಭೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ನಿವೃತ್ತ ಶಿಕ್ಷಕರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರನ್ನು ಆಧಿರಿಸಿದ ಎಸಿಬಿ ದಕ್ಷಿಣ ವಲಯ ಅಧೀಕ್ಷಕ ಸಜೀತ್  ರವರ ಮಾರ್ಗದರ್ಶನದಲ್ಲಿ ಕಾರ್ಯಾಪಡೆ ನಡೆಸಿದ ಅಧಿಕಾರಿಗಳು ಬಿಇಓ ಚಂದ್ರಕಾಂತ್ ಹಾಗೂ ಅಧಿಕ್ಷಕ ಶಂಕರ್ ಅವರನ್ನು ಬಲೆಗೆ ಬೀಳಿಸಿದೆ. ಈ ವೇಳೆ ನಿವೃತ್ತ ಶಿಕ್ಷಕರ ಬಳಿ 5 ಸಾವಿರ  ಲಂಚ ಸ್ವೀಕರಿಸುತ್ತಿದ್ದಾಗ ಚಂದ್ರಕಾಂತ್ ಹಾಗೂ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅಧೀಕ್ಷಕ ಶಂಕರ್ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು.

ಆರೋಪಿಗಳನ್ನು ದಸ್ತಗಿರಿ ಮಾಡಿದ ಪೊಲೀಸರು ಮುಂದಿನ ತನಿಖೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News