ಮೂಡಲಗಿ; ಬಸ್ ನಿಲ್ದಾಣದ ಬಳಿ 7 ಭ್ರೂಣಗಳು ಪತ್ತೆ: ತನಿಖೆಗೆ ತಂಡ ರಚನೆ

Update: 2022-06-25 06:35 GMT

ಬೆಳಗಾವಿ: ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯ ಹಳ್ಳದಲ್ಲಿ 7 ಭ್ರೂಣಗಳ ಮೃತದೇಹ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. 

5 ಡಬ್ಬಿಗಳಲ್ಲಿ 7 ಭ್ರೂಣಗಳ ಮೃತದೇಹಗಳನ್ನು ತುಂಬಿ ಹಳ್ಳದಲ್ಲಿ ಹರಿ ಬಿಡಲಾಗಿದೆ. ಶುಕ್ರವಾರ ಬೆಳಗ್ಗೆ ಬಸ್ ನಿಲ್ದಾಣದ ಬಳಿಯ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭ್ರೂಣಗಳ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.  

ಮೂಡಲಗಿ ಪಟ್ಟಣದಲ್ಲಿ ಡಬ್ಬಿಗಳಲ್ಲಿ ಮೃತ ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಭ್ರೂಣಗಳನ್ನು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಯಾರು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಒಂದು ತಂಡವನ್ನು ರಚಿಸಲಾಗುವುದು

- ಡಿಎಚ್ಒ ಡಾ.ಮಹೇಶ ಕೋಣಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News