ಪಠ್ಯ ಪರಿಷ್ಕರಣೆ ಲೋಪ ಸರಿಪಡಿಸದಿದ್ದರೆ ಹೋರಾಟ: ನಿರಂಜನಾನಂದಪುರಿ ಸ್ವಾಮೀಜಿ

Update: 2022-06-25 13:13 GMT

ದಾವಣಗೆರೆ: ರಾಜ್ಯ ಸರಕಾರ ಪಠ್ಯ ಪರಿಷ್ಕರಣೆಯಲ್ಲಿ ಆದಂತಹ ಲೋಪ, ದೋಷಗಳನ್ನು ಶೀಘ್ರದಲ್ಲೇ ಸರಿಪಡಿಸಿಕೊಳ್ಳಿ. ನಿಮ್ಮ ಉದ್ಘಟತನ, ಕಾರ್ಯವೈಖರಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟಗಳ ಅನುಭವಿಸಬೇಕಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಎಚ್ಚರಿಕೆ ನೀಡಿದರು.

ಕಾಗಿನೆಲೆ ಕನಕಗುರು ಪೀಠದ ಬೆಳ್ಳೂಡಿ ಚಂದ್ರಗುಪ್ತ ಮೌರ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಯಾವುದೇ ಒಂದು ಜಾತಿಗೆ ಶಿಕ್ಷಣವನ್ನು ಸೀಮಿತಗೊಳಿಸಬಾರದು. ಕುವೆಂಪು, ಬಸವಣ್ಣ, ಕನಕದಾಸರು ಇಂತಹ ಮಹಾನೀಯರುಗಳ ಸತ್ಯ ಜೀವನ ಚರಿತ್ರೆಯನ್ನು ಸಮುದಾಯಕ್ಕೆ ಪ್ರಾಮಾಣಿಕವಾಗಿ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಕೆಲವು ನೈಜ ಅಂಶಗಳನ್ನು ಮುಚ್ಚಿಟ್ಟು , ಇಲ್ಲ ಸಲ್ಲದ ಅಂಶಗಳನ್ನು ಜನರಿಗೆ ತಿಳಿಸುವ, ಮಕ್ಕಳಿಗೆ ಕಲಿಸುವ ಕೆಲಸ ಮಾಡಬಾರದು. ಆದಷ್ಟು ಬೇಗ ಪಠ್ಯ ಪರಿಷ್ಕರಣೆಯಲ್ಲಾದ ಲೋಪ-ದೋಷಗಳ ಸರಿಪಡಿಸುತ್ತೇವೆಂಬ ನಂಬಿಕೆ ನನಗಿದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ನಾವು ಸಹ ಈ ವಿಚಾರವಾಗಿ ಬೆಂಬಲಿಸಿ ಹೋರಾಟಕ್ಕಿಳಿಯಬೇಕಾಗಲಿದೆ ಎಂಬ ಎಚ್ಚರಿಕೆ ನೀಡುತ್ತೇವೆ ಎಂದರು.

ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಶ್ರೀಗಳು, ಈ ವಿಚಾರವಾಗಿ ಎಲ್ಲಾ ಸಂಶೋಧನೆ ನಡೆದು ಸರ್ಕಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ವರದಿ ಸಿಗಲಿದೆ. ನಾನು ಮಾಧ್ಯಮದ ಮುಂದೆ ಹೇಳಲು ಇಷ್ಟ ಪಡುವುದಿಲ್ಲ ಎಂದರು.

ಎಸ್ಟಿ ಮೀಸಲಾತಿ ನೀಡುವ ವಿಚಾರವಾಗಿ ನಮ್ಮ ಹೋರಾಟ ಆರಂಭವಾದಾಗಿನಿಂದ ನಾವು ಒಂದು ದಿನವು ನೆಮ್ಮದಿಯಿಂದ ಇಲ್ಲ. ಪ್ರತಿದಿನವೂ ಕಾರ್ಯ ವೈಕರಿ ಮಾಡುತ್ತಾ ಬಂದಿದ್ದೇವೆ. ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಸಮಗ್ರವಾದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಒಂದು ತಿಂಗಳ ಒಳಗೆ ಅ ಸಂಶೋಧನ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತದೆ. ಸರ್ಕಾರ ಬಳಿ ವರದಿ ಹೋದ ನಂತರ ಸರ್ಕಾರಕ್ಕೆ ಒತ್ತಾಯ ಮಾಡಿ ಕೇಂದ್ರಕ್ಕೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದರು.

ಮಠಗಳಿಗೆ ಪಕ್ಷದ ವರೀಷ್ಠರು ಭೇಟಿ ನೀಡುವುದು ಅವರ ವೈಯಕ್ತಿಕ. ಅವರು ಮಠಕ್ಕೆ ಬರುವುದು ಬೇಡಾ ಎನ್ನಲಾಗುವುದಿಲ್ಲ. ಮಠ ರಾಜಕೀಯ ಮಾಡಿಸಬೇಕೇ ಹೊರತು ಮಠ ರಾಜಕೀಯ ಮಾಡಬಾರದು ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News