ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 215 ಪ್ರಕರಣಗಳು ಇತ್ಯರ್ಥ

Update: 2022-06-25 16:38 GMT

ಬೆಂಗಳೂರು, ಜೂ. 25: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಾಧಿಕರಣ ಹಾಗೂ ಕರ್ನಾಟಕ ರಿಯಲ್  ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ  2ನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಭಿವೃದ್ದಿದಾರರು ಹಾಗೂ ನಿವೇಶನ ಖರೀದಿದಾರರ ನಡುವೆ ನಾಲ್ಕು ಪೀಠಗಳಲ್ಲಿ ನಡೆದ ರಾಜಿ ಸಂಧಾನದ ಮೂಲಕ ಒಟ್ಟು 215 ಪ್ರಕರಣಗಳಲ್ಲಿ ರೂ.5.85 ಕೋಟಿಗಳ ಇತ್ಯರ್ಥಪಡಿಸಲಾಗಿದೆ.  

ಪ್ರಾರಂಭದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ. ವೀರಪ್ಪರವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಿಯಲ್ ಎಸ್ಟೇಟ್ ಅಭಿವೃದ್ದಿದಾರರು ಹಾಗೂ ನಿವೇಶನ ಖರೀದಿದಾರರು ಬ್ಯಾಂಕ್‍ನಿಂದ ಸಾಲಮಾಡಿ ಸಾಲಗಾರರಾಗಿ ವ್ಯಾಜ್ಯ ಮಾಡುವುದನ್ನು ಬಿಟ್ಟು, ಇಬ್ಬರು ಲೋಕ್ ಅದಾಲತ್ ಮೂಲಕ ರಾಜಿ ಸಂಧಾನವನ್ನು ಮಾಡಿಕೊಂಡು ನೆಮ್ಮದಿ ಜೀವನ ಮಾಡುವಂತೆ ಸಲಹೆ ನೀಡಿದರು. 

ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷರು ಹಾಗೂ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ. ಶ್ರೀನಿವಾಸೆಗೌಡರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಟಿ. ವೆಂಕಟೇಶ್ ನಾಯಕ್, ಸಿಟಿ ಸಿವಿಲ್ ಮತ್ತು ಸೆಕ್ಷನ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಎಂ.ಜೋಶಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರಶೆಟ್ಟಿ, ರೇರಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಇಬ್ರಾಹಿಂ ಮೈಗೂರರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News