ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾಗಿ ಜಸ್ಟಿಸ್‌ ಅಬ್ದುಲ್‌ ನಝೀರ್‌ ಸಹೋದರ ಮುಹಮ್ಮದ್‌ ಫಾರೂಕ್‌ ಆಯ್ಕೆ

Update: 2022-06-25 18:50 GMT

ಬೆಂಗಳೂರು: ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಅಲ್ಪಸಂಖ್ಯಾತ ಮೋರ್ಚಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷರನ್ನಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜಸ್ಟಿಸ್‌ ಅಬ್ದುಲ್‌ ನಝೀರ್‌ ರವರ ಸಹೋದರ ಮುಹಮ್ಮದ್‌ ಫಾರೂಕ್‌ ರನ್ನು ನೇಮಕ ಮಾಡಲಾಗಿದೆ. ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನೀಡಿದ ಪಂಚಸದಸ್ಯ ಪೀಠದಲ್ಲಿ ಜಸ್ಟಿಸ್‌ ಅಬ್ದುಲ್‌ ನಝೀರ್‌ ಒಬ್ಬರಾಗಿದ್ದರು.

ರಾಜ್ಯ ಅಲ್ಪಸಂಖ್ಯಾತ ಮೋರ್ಚಾಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆದೇಶ ಹೊರಡಿಸಿದ್ದಾರೆ. ಮುಹಮ್ಮದ್‌ ಫಾರೂಕ್‌ ರವರು ಇದಕ್ಕೂ ಮುಂಚೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಉಪಾಧ್ಯಕ್ಷರಾಗಿ ಮುಹಮ್ಮದ್‌ ಫಾರೂಕ್‌, ಅಹ್ಮದ್‌ ರಫಿ ಪೀರ್‌ಜಾದೆ,  ಎಸ್‌.ಎನ್. ರಾಜು,‌ ಮುಹಮ್ಮದ್‌ ಸಿರಾಜುದ್ದೀನ್‌, ಇಮ್ತಿಯಾಝ್‌ ಮುಲ್ಲಾ, ಸಲೀಂ ಅಂಬಾಗಿಲುರನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News