ಚಿಕ್ಕಮಗಳೂರು: 2 ಸಹಕಾರಿ ಸಂಘಗಳಿಗೆ ಕೃಷಿ ಜಾಗೃತ ದಳದಿಂದ ಶೋಕಾಸ್ ನೋಟಿಸ್

Update: 2022-06-25 18:28 GMT

ಚಿಕ್ಕಮಗಳೂರು, ಜೂ.25: ಕಳಸ ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಾಳೆಹೊಳೆ ಮತ್ತು ಸಂಸೆ ಶಾಖೆಗಳ ರಸಗೊಬ್ಬರ ಮತ್ತು ಕೀಟ ನಾಶಕ ಮಾರಾಟ ಮಳಿಗೆ ಮೇಲೆ ಕೃಷಿ ಜಾಗೃತ ದಳದ ಸಹಾಯಕ ನಿರ್ದೇಶಕ ಎಸ್. ವೆಂಕಟೇಶ್ ಚೌವ್ಹಾಣ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಮಾರಾಟ ಮಳಿಗೆಯ ಪರವಾನಿಗೆ, ದಾಸ್ತಾನು ವಹಿ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸಿ ಪರವಾನಿಗೆಗಳಲ್ಲಿ ಮೂಲ ಪ್ರಮಾಣ ಪತ್ರ ಮತ್ತು ಪಿಸಿಗಳನ್ನು ಸೇರ್ಪಡೆ ಮಾಡದೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ಈ ವೇಳೆ ದಾಖಲಾತಿ ನಿರ್ವಹಿಸದೆ ಮಾರಾಟ ಮಾಡುತ್ತಿದ್ದ ರಸಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸ್ ನೀಡಿ, ಅಧಿಕೃತ ದಾಖಲಾತಿ ಒದಗಿಸದೇ ಇದ್ದ ಪಕ್ಷದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅನುಸಾರ ಜಪ್ತಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದೆ. ಈ ಸಂದರ್ಭದಲ್ಲಿ ಕಳಸ ಹೋಬಳಿಯ ಕೃಷಿ ಅಧಿಕಾರಿ ಪಾಂಡುರಂಗ, ಅಶೋಕ್, ಹರೀಶ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News