ಗುಜರಾತ್‍ನಲ್ಲಿ ಹೋರಾಟಗಾರರನ್ನು ಬಂಧಿಸಿರುವುದು ಸೇಡಿನ ಕ್ರಮ: ಎಸ್‍ಯುಸಿಐ ಖಂಡನೆ

Update: 2022-06-26 17:13 GMT

ಬೆಂಗಳೂರು, ಜೂ.26: ಗುಜರಾತ್ ಕೋಮುಗಲಭೆಯ ಸೇಡಿನ ಕ್ರಮವಾಗಿ ಗುಜರಾತ್‍ನ ಬಿಜೆಪಿ ಸರಕಾರವು ಮಾನವ ಹಕ್ಕುಗಳ ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್ ಸೇರಿ ಮತ್ತಿತರನ್ನು ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರ ಬಿಡುಗಡೆಗಾಗಿ ದೇಶದ ಪ್ರಜಾತಂತ್ರವಾದಿ ಜನತೆ ಹೋರಾಟ ಕಟ್ಟಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಕರೆ ನೀಡಿದೆ.

ರವಿವಾರ ಪ್ರಕಟಣೆ ನೀಡಿರುವ ಕಾರ್ಯದರ್ಶಿ ಕೆ.ಉಮಾ, ಗುಜರಾತ್ ಗಲಭೆ, ಶ್ರೀ ಜಾಫ್ರಿ ಮತ್ತಿತರರ ಹತ್ಯಾಕಾಂಡದಲ್ಲಿ ಮೋದಿಯವರು ನಿರಪರಾಧಿ ಎಂದು ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದೆಯಾದರೂ, ದೇಶದ ಜನರ ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಮೋದಿಯವರು ಎಂದಿಗೂ ಅಪರಾಧಿ ಸ್ಥಾನದಲ್ಲೇ ಉಳಿಯಲಿದ್ದಾರೆ. ಹಾಗಾಗಿ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News