×
Ad

VIDEO- ವ್ಹೀಲಿಂಗ್, ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್ ಗಳನ್ನು ಬುಲ್ಡೋಜರ್ ನಿಂದ ಪುಡಿಗಟ್ಟಿದ ಪೊಲೀಸರು

Update: 2022-06-27 19:23 IST

ಚಿಕ್ಕಮಗಳೂರು, ಜೂ.27: ಕರ್ಕಶ ಶಬ್ಧ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬೈಕ್‍ಗಳ ಸೈಲೆನ್ಸರ್ ಗಳನ್ನು ವಶಕ್ಕೆ ಪಡೆದ ನಗರ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಸೋಮವಾರ ಅವುಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ ಪಡಿಸಿದ್ದಾರೆ.

ರವಿವಾರ ನಗರದ ರಾಷ್ಟ್ರೀಯ ಹೆದ್ದಾರಿಯ ಕೆ.ಎಂ.ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದವರ ಬೈಕ್‍ಗಳನ್ನು ವಶಕ್ಕೆ ಪಡೆಯುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಸೋಮವಾರ ಕರ್ಕಶ ಶಬ್ಧ ಮಾಡುತ್ತಿದ್ದ ಬೈಕ್‍ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್‍ಳನ್ನು ನಾಶಪಡಿಸಿದ್ದಾರೆ. ಸಂಚಾರಿ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದ 11 ಬೈಕ್‍ಗಳ ಸೈಲೆನ್ಸರ್‍ಗಳನ್ನು ರಸ್ತೆ ಮೇಲೆ ಜೋಡಿಸಿಟ್ಟು ಅವುಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಪಡಿಸಿದರು.

ಅಲ್ಲದೇ ನಗರದಾದ್ಯಂತ ಅರ್ಧ ಹೆಲ್ಮೆಟ್ ಧರಿಸಿ ಬೈಕ್ ಓಡಿಸುತ್ತಿದ್ದವರನ್ನು ಅಡ್ಡಗಟ್ಟಿ ಅವರಿಂದ ಹೆಲ್ಮಟ್‍ಗಳನ್ನು ವಶಕ್ಕೆ ಪಡೆದು ಅವುಗಳನ್ನೂ ನಾಶ ಪಡಿಸಿರುವ ಪೊಲೀಸರು ಪೂರ್ಣ ತಲೆ ಮುಚ್ಚುವ ಹೆಲ್ಮೆಟ್‍ಗಳನ್ನೇ ಧರಿಸಬೇಕೆಂದು ಎಚ್ಚರಿಕೆಯನ್ನು ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. 

ಈ ವೇಳೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಚಂದ್ರಶೇಖರ್, ಸುನೀತಾ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News