ಸರಕಾರಗಳಿಂದ ಬಲಿಷ್ಠರಿಗೆ ಪ್ರಾಶಸ್ತ್ಯ, ಹಕ್ಕಿಪಿಕ್ಕಿಗಳ ನಿರ್ಲಕ್ಷ್ಯ: ಆರೋಪ

Update: 2022-06-27 18:12 GMT

ಬೆಂಗಳೂರು, ಜೂ.27: ಸ್ವತಂತ್ರ ಬಂದು ಏಳು ದಶಕಗಳು ಕಳೆದರೂ ಬುಡಕಟ್ಟು ಸಮುದಾಯಗಳಾದ ಹಕ್ಕಿಪಿಕ್ಕಿ ಜನಾಂಗಕ್ಕೆ ಸರಕಾರದ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ ಈ ಅಲೆಮಾರಿ ಜನಾಂಗದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆ ಸರಕಾರಕ್ಕೆ ಒತ್ತಾಯಿಸಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಸಂಘಟನೆಯ ಅಧ್ಯಕ್ಷ ಪುನೀತ್ ಕುಮಾರ್ ಆರ್. ಮಾತನಾಡಿ, ರಾಜ್ಯದಲ್ಲಿ ಹಕ್ಕಿಪಿಕ್ಕಿ ಸಮುದಾಯವು ಏಳು ಲಕ್ಷ ಜನಸಂಖ್ಯೆ ಇದ್ದರೂ, ಮೂಲಭೂತ ಸೌಕರ್ಯಗಳಿಂದ ಸಮುದಾಯ ವಂಚಿತವಾಗಿದೆ. ಪರಿಣಾಮವಾಗಿ ಕಡು ಬಡತನದಿಂದ ಜೀವನ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಲಿಷ್ಠ ಸಮುದಾಯಗಳು ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳುತ್ತಿವೆ. ನಮ್ಮನ್ನು ಆಳಿದ ಸರಕಾರಗಳು ಆ ಬಲಿಷ್ಠ ಸಮುದಾಯಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿ, ಹಕ್ಕಿಪಿಕ್ಕಿ ಸಮುದಾಯವನ್ನು ಕಡೆಗಣಿಸಿದೆ. ಇನ್ನು ಮುಂದೆಯಾದರೂ, ಹಕ್ಕಿಪಿಕ್ಕಿ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು ಎಂದು ಅವರು ಸರಕಾರಕ್ಕೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News