×
Ad

ಅರಸೀಕೆರೆ | ಕರಡಿ ದಾಳಿ; ರೈತನಿಗೆ ಗಾಯ

Update: 2022-06-28 16:58 IST

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿಯ ಮೈಲನಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ತೋಟಕ್ಕೆ ಹೋದ ರೈತ ರಾಜಶೇಖರಪ್ಪ (65) ಎಂಬವರ ಮೇಲೆ ಕರಡಿಯೊಂದು ದಾಳಿ ನಡೆಸಿದೆ. 

ಎಂದಿನಂತೆ ಬೆಳಗಿನ ಜಾವ ಎದ್ದು ತೋಟಕ್ಕೆ ಹೋಗುವ ರಾಜಶೇಖರಪ್ಪ ತೋಟ ಸುತ್ತಾಡುವ ಸಮಯದಲ್ಲಿ ಕರಡಿಯೊಂದು ಏಕಾಏಕಿ ಎಗರಿ ಮೈ ಕೈಗೆ ತರಚಿ ತಲೆಬುರುಡೆ ಕೂದಲು ಹಿಡಿದು ಎಳೆದಾಡಿ ಹರಿತವಾದ ಉಗುರುಗಳಿಂದ ಪರಚಿದೆ. ಇದರಿಂದ ಗಾಯಗೊಂಡ ರಾಜಶೇಖರಪ್ಪ  ಬಳಿಕ ಕರಡಿ ಕೈಯಿಂದ ತಪ್ಪಿಸಿಕೊಂಡು ಬಂದು ಗ್ರಾಮದಲ್ಲಿ ವಿಷಯ ತಿಳಿಸಿದ್ದಾರೆ. 

ಊರಿನ ಗ್ರಾಮಸ್ಥರು ರಾಜಶೇಖರಪ್ಪಗೆ ಅರಸೀಕೆರೆ ಸರಕಾರಿ ಜೆ.ಸಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. 

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಸುದ್ದಿ ತಿಳಿದ ಅರಣ್ಯ ಇಲಾಖೆಯವರು ರೈತನ ಮೇಲೆ ದಾಳಿ ಮಾಡಿದ ಕರಡಿಗಾಗಿ ಶೋಧ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News